ಜಿಲ್ಲೆ

ಕಿಡಿಗೇಡಿಗಳಿಂದ ಶುಂಠಿ ಬೆಳೆ ನಾಶ

ಆಲೂರು: ತಾಲೂಕಿನ ಕದಾಳು ಗ್ರಾಮದಲ್ಲಿ ಎರಡು ಎಕರೆಯಲ್ಲಿ ಬೆಳೆದಿದ್ದ ಶುಂಠಿ ಬೆಳೆಗೆ ದುಷ್ಕರ್ಮಿಗಳು ಕಳೆನಾಶಕ ಸಿಂಪಡಿಸಿ ನಾಶಪಡಿಸಿದ್ದಾರೆ.
ಗ್ರಾಮದ ರೈತ ಸಹೋದರರಾದ ನಿಂಗರಾಜು ಮತ್ತು ಕೆಂಚೇಗೌಡ ಎಂಬುವರು ಎರಡು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಶುಂಠಿ ಬೆಳೆಗೆ ಕಿಡಿಗೇಡಿಗಳು ವೈಯಕ್ತಿಕ ದ್ವೇಷದಿಂದ ಮೂರು ದಿನಗಳ ಹಿಂದೆ ರಾತ್ರೋರಾತ್ರಿ ಕಳೆನಾಶಕ ಸಿಂಪಡಿಸಿದ್ದು, ಬೆಳೆ ಸಂಪೂರ್ಣ ಸುಟ್ಟುಹೋಗಿದೆ. ಎರಡು ತಿಂಗಳು ಕಳೆದಿದ್ದರೆ ಫಸಲು ಕೈ ಸೇರುತ್ತಿತ್ತು. ಆದರೆ ಕಿಡಿಗೇಡಿಗಳು ಮಾಡಿದ ಕೃತ್ಯಕ್ಕೆ ರೈತ ಸಹೋದರರಿಬ್ಬರು ಕಂಗಾಲಾಗಿದ್ದಾರೆ. ಆಲೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.