ಜಿಲ್ಲೆ

ಕಿಟೆಲ್ ಕಾಲೇಜಿನಲ್ಲಿ ಹಳೆಯ ವಿದ್ಯಾರ್ಥಿಗಳ ಸಮಾಗಮ

ಧಾರವಾಡ: ಹಳೆಯ ದಿನಗಳ ಮೆಲುಕು, ಕಾಲೇಜಿನಲ್ಲಿ ಕಳೆದ ಕ್ಷಣಗಳ ನೆನಪುಗಳ ಹರಟೆ. 2 ದಶಕದ ಬಳಿಕ ವಿದ್ಯಾರ್ಥಿಗಳ ಸಮಾಗಮ.
ಇಂತಹ ಹೃದಯಸ್ಪರ್ಶಿ ಸಮಾರಂಭಕ್ಕೆ ನಗರದ ಕಿಟೆಲ್ ಕಲಾ ಮಹಾವಿದ್ಯಾಲಯ ಸಾಕ್ಷಿಯಾಯಿತು. 2002- 03ನೇ ಶೈಕ್ಷಣಿಕ ಸಾಲಿನ ಪದವಿ ಪೂರೈಸಿದ ವಿದ್ಯಾರ್ಥಿಗಳಿಂದ ಗುರುವಂದನೆ ಮತ್ತು ಸ್ನೇಹ ಸಮ್ಮಿಲನ ಕಾರ್ಯಕ್ರಮ ಭಾನುವಾರ ನಡೆ¬ತು. 21 ವರ್ಷಗಳ ಬಳಿಕ ಸ್ನೇಹಿತರೆ¯್ಲ ಮುಖಾಮುಖಿ ಭೇಟಿಯಾದರು. ಕಾಲೇಜಿನ ದಿನಗಳಿಗೆ ಜಾರಿದರು.
ಕಾಲೇಜಿನಲ್ಲಿ ಪದವಿ ಮುಗಿಸಿದ ಹಳೆಯ ವಿದ್ಯಾರ್ಥಿಗಳು ಇದೀಗ ವಿವಿಧ ವೃತ್ತಿಯಲ್ಲಿ ಜೀವನ ರೂಪಿಸಿಕೊಂಡಿದ್ದಾರೆ. ಕಲಿಸಿದ ಗುರುಗಳಿಗೆ ಗೌರವ ಸಲ್ಲಿಸಲು ಇವರೆಲ್ಲ ಮತ್ತೆ ಒಂದೆಡೆ ಸೇರಿದ್ದರು. ವಿವಿಧ ವಿಷಯಗಳ ಬೋಧಕರಿಗೆ ಸನ್ಮಾನಿಸಿ ಕಲಿಕಾ ಋಣ ತೀರಿಸುವ ಕೆಲಸ ಮಾಡಿದರು. ಜತೆಗೆ, ಹಳೆಯ ಸಹಪಾಠಿಗಳೊಂದಿಗೆ ಹರಟೆ ಹೊಡೆದು ಕಾಲೇಜಿನ ಜೀವನವನ್ನು ಸ್ಮರಿಸಿಕೊಂಡು ಸಂಭ್ರಮಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ನಿವೃತ್ತ ರಾಜ್ಯಶಾಸ್ತç ಪ್ರಾಧ್ಯಾಪಕ ಸುಕುಮಾರ್ ಮಾತನಾಡಿ, ವಿದ್ಯಾರ್ಥಿ ಜೀವನ ಪ್ರತಿಯೊ¨್ಬ ವ್ಯಕ್ತಿಯ ಬದುಕನ್ನು ಭದ್ರಗೊಳಿಸುತ್ತದೆ. ಜತೆಗೆ, ಭವಿಷ್ಯಕ್ಕೆ ಬುನಾದಿ ಹಾಕುತ್ತದೆ. ಶಿಕ್ಷಕರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳ ಪ್ರತಿಭೆ ಅರಳಿ, ಸಮÁಜಕ್ಕೆ ದಾರಿ ದೀಪವಾಗಬೇಕು ಎಂದರು.
ನಿವೃತ್ತ ಕನ್ನಡ ಪ್ರಾಧ್ಯಾಪಕ, ಸಾಹಿತಿ ಡಾ. ಜಿ.ಎಂ. ಹೆಗಡೆ ಮಾತನಾಡಿ, ಅಂತರ್ಜಾಲದ ಸಹಾಯದಿಂದ ಹಳೆಯ ವಿದ್ಯಾರ್ಥಿಗಳು ಒಂದೆಡೆ ಸೇರುವಂತಾಗಿದೆ. ಇದು ವಿದ್ಯಾರ್ಥಿಗಳ ಪುನರ್ ಮಿಲನ. ಹಳೆಯ ನೆನಪುಗಳ ರಿಂಗಣ, ಹೊಸತನ ಸ್ವೀಕಾರದ ಘಳಿಗೆಯÁಗಿದೆ. ಇಂತಹ ಕ್ಷಣಗಳು ಸುಂದರ ಬದುಕು ಕಟ್ಟಿಕೊಡುತ್ತವೆ ಎಂದರು.
ನಿವೃತ್ತ ಇತಿಹಾಸ ಪ್ರಾಧ್ಯಾಪಕ ಡಾ. ಎಂ.ವೈ. ಸಾವಂತ ಮಾತನಾಡಿ, ವಿದ್ಯಾರ್ಥಿಗಳು ನಾಯಕತ್ವ ಗುಣ ಬೆಳೆಸಿಕೊಳ್ಳಬೇಕು. ಸಂಘಟನಾತ್ಮಕ, ನಿರ್ವಹಣಾ ಕಲೆಯನ್ನು ಮೈಗೂಡಿಸಿಕೊಳ್ಳಬೇಕು ಎಂದರು.
ಪ್ರಾಚಾರ್ಯೆ ಡಾ. ರೇಖಾ ಜೋಗುಳ ಮಾತನಾಡಿ, ಹಳೆಯ ವಿದ್ಯಾರ್ಥಿಗಳ ಪ್ರಯತ್ನದಿಂದ ಕಾಲೇಜಿನ ವಿವಿಧ ಅಭಿವೃದ್ಧಿ ಕೆಲಸಗಳು ಆಗಿವೆ. ಸರ್ಕಾರದಿಂದ 2 ಕೋಟಿ ರೂಪಾಯಿ ಅನುದಾನ ದೊರೆಯುವಲ್ಲೂ ವಿದ್ಯಾರ್ಥಿಗಳ ತೆರೆಮರೆಯ ಶ್ರಮ ಇದೆ. ಜತೆಗೆ, ಕಿಟೆಲ್ ಪ್ರತಿಮೆ, ಕಂಪ್ಯೂಟರ್, ಪೀಠೋಪಕರಣ ಸೇರಿ ಇನ್ನಿತರ ವಸ್ತುಗಳನ್ನು ದೇಣಿಗೆ ನೀಡುವ ಮೂಲಕ ಕಾಲೇಜಿನ ಮೂಲ ಸೌಲಭ್ಯ ವೃದ್ಧಿಗೆ ನೆರವಾಗಿದ್ದಾರೆ ಎಂದು ಸ್ಮರಿಸಿದರು.