ಜಿಲ್ಲೆ

ಕಿಕ್ಕೇರಿಯಾದ್ಯಂತ ತುಳಸಿ ಹಬ್ಬ ಆಚರಣೆ

ಕಿಕ್ಕೇರಿ: ಪಟ್ಟಣ ಸೇರಿದಂತೆ ಹೋಬಳಿಯಾದ್ಯಂತ ತುಳಸಿ ಹಬ್ಬವನ್ನು ಸಂಭ್ರಮ ಸಡಗರದಿಂದ ಶುಕ್ರವಾರ ಆಚರಿಸಲಾಯಿತು. ಬ್ರಾಹ್ಮಿಮುಹೂರ್ತದಲ್ಲಿ ಮನೆ ಮುಂದೆ ತುಳಸಿ ವೃಂದಾವನದ ಬಣ್ಣದ ರಂಗೋಲಿ ಬಿಡಿಸಿ, ವೃಂದಾವನಕ್ಕೆ ಪುಷ್ಪಾಲಂಕಾರ ಮಾಡಿ, ನೆಲ್ಲಿಕಾಯಿ ರೆಂಬೆಯನ್ನು ಇಡಲಾಗಿತ್ತು. ಶಾಲಿಗ್ರಾಮ ರೂಪದಲ್ಲಿ ವಿಷ್ಣು, ತುಳಸಿ ದೇವಿ ವಿವಾಹವಾದ ಪವಿತ್ರ ದಿನ ಎಂದು ದೇವರನ್ನು ಸ್ಮರಿಸಿದರು. ವಿಷ್ಣುವಿಗೆ ಪ್ರಿಯವಾದ ಆಹಾರ ನೈವೇದ್ಯ ಇಟ್ಟು, ದೀಪ ಬೆಳಗಿಸಿದರು. ಬಂದ ಬಂಧುಗಳಿಗೆ ತೀರ್ಥ ಪ್ರಸಾದ ವಿನಿಯೋಗ ಮಾಡಿದರು.