ಜಿಲ್ಲೆ

ಕಿಕ್ಕೇರಿಯಲ್ಲಿ ಯಜ್ಞೋಪವಿತ ಧಾರಣೆ

ಕಿಕ್ಕೇರಿ ವಿಪ್ರ ಸಮಾಜದವರು ಯಜ್ಞೋಪವಿತ ಧಾರಣೆಯನ್ನು ಈಚೆಗೆ ಶಾಸೋಕ್ತವಾಗಿ ಮಾಡಿದರು. ಮುಖಂಡರಾದ ನಾಗೇಶ್, ಮಹಬಲಶರ್ಮ, ವೆಂಕಟೇಶ್, ಶ್ರೀಹರಿ, ಗಣೇಶ್‌ರಾವ್, ಪ್ರಭಾಕರ್, ರಾಮಣ್ಣ ಮತ್ತಿತರರಿದ್ದರು.

ಎಂ.ರವಿ

ಕಿಕ್ಕೇರಿ: ಪುರೋಹಿತ ನಾಗೇಶ್ ಮಾರ್ಗದರ್ಶನದಲ್ಲಿ ಪಟ್ಟಣದ ವಿಪ್ರ ಸಮುದಾಯದವರು ಯಜ್ಞೋಪವಿತ ಧಾರಣೆಯನ್ನು ಈಚೆಗೆ ನೆರವೇರಿಸಿದರು.


ಸುಬ್ಬರಾಯ ಛತ್ರದಲ್ಲಿ ಹೋಮಕುಂಡ ಪ್ರದಕ್ಷಿಣೆ ಹಾಕಿ ಜನಿವಾರ ಧಾರಣೆಗೆ ಸಜ್ಜಾದರು. ಉದ್ಧರಣೆ, ಪಂಚಪಾತ್ರೆ, ಹಿಡಿದು ತೀರ್ಥ ಆಪೋಷಣೆ ಮಾಡಿ, ಗಾಯತ್ರಿ ಮಂತ್ರ ಜಪಿಸಿದರು. ಕುಲದೇವರನ್ನು ಸ್ಮರಿಸಿದರು. ವಿವಿಧ ಪೂಜಾ ವಿ ಮಾಡುತ್ತ ಸಂಪ್ರದಾಯದಂತೆ ಜನಿವಾರ ಧಾರಣೆ ಮಾಡಿದರು.
ಮಹಬಲಶರ್ಮ, ವೆಂಕಟೇಶ್, ಗಣೇಶ್‌ರಾವ್, ಪ್ರಭಾಕರ್, ರಾಮಣ್ಣ, ಶ್ರೀಹರಿ, ಅನಂತಸ್ವಾಮಿ, ಭಾಸ್ಕರ್, ಮಹಬಲರಾವ್ ಮತ್ತಿತರರಿದ್ದರು.