ಜಿಲ್ಲೆ

ಕಿಕ್ಕೇರಿಯಲ್ಲಿ ಪ್ರತಿಭಟನೆ

ಬಾಲಮುರಳಿಕೃಷ್ಣ

ಕಿಕ್ಕೇರಿ: ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನು ಖಂಡಿಸಿ ಕಿಕ್ಕೇರಿಯಲ್ಲೂ ಶನಿವಾರ ಆಕ್ರೋಶ ವ್ಯಕ್ತವಾಯಿತು.
ಪಟ್ಟಣದಲ್ಲಿ ಹಳೇ ಬಸ್‌ನಿಲ್ದಾಣದ ಬಳಿ ಶನಿವಾರ ಕರವೇ ಕಾರ್ಯಕರ್ತರು ಮಾನವ ಸರಪಳಿ ನಿರ್ಮಿಸಿ ಕಾವೇರಿ ತೀರ್ಪಿನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನಮಗೆ ನೀರಿಲ್ಲ, ಬರಗಾಲ ಬಂದಿದೆ. ಮೈಸೂರು, ಬೆಂಗಳೂರು ಮೊದಲಾದ ನಗರಗಳಲ್ಲಿ ಮಳೆಗಾಲವೇ ಬರಗಾಲದಂತಾಗಿ ಕುಡಿಯಲು ನೀರಿಲ್ಲದಂತಾಗಿದೆ. ಹೀಗಿರುವಾಗ ಕೇಂದ್ರ, ರಾಜ್ಯ ಸರ್ಕಾರ ಅಧಿಕಾರಕ್ಕಾಗಿ ಮೌನವಾಗಿವೆ. ತಮಿಳುನಾಡು ನೀರಿಗಾಗಿ ಪದೇ ಪದೆ ಕ್ಯಾತೆ ತೆಗೆಯುವುದನ್ನು ಮೊದಲು ನಿಲ್ಲಿಸಬೇಕು ಎಂದು ಕಿಡಿ ಕಾರಿದರು.


ಸುಗಮ ಸಂಗೀತ ಗಾಯಕ ಡಾ. ಕಿಕ್ಕೇರಿ ಕೃಷ್ಣಮೂರ್ತಿ ಕಾವೇರಿ ಕುರಿತು ಹತ್ತು ಹಲವು ಹಾಡುಗಳನ್ನು ಹಾಡಿ, ಕಾವೇರಿ ನಮ್ಮದು ಎಂದು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು. ಬೈಕ್ ರ‌್ಯಾಲಿ ನಡೆಸಿ ಘೋಷಣೆ ಕೂಗುತ್ತ ಸಾಗಿದರು. ಕರವೇ ಸಾಸಲು ಗುರುಮೂರ್ತಿ, ರೈತ ಸಂಘದ ಚಿಕ್ಕಮಂದಗೆರೆ ಜಯರಾಂ, ಹೋಬಳಿ ಅಧ್ಯಕ್ಷ ಪದ್ಮನಾಭ್, ಪ್ರಧಾನ ಕಾರ್ಯದರ್ಶಿ ಆನಂದ್, ಚಿನ್ನಬೆಳ್ಳಿ ಗಂಗಾಧರ್, ಚಿಕ್ಕೇಗೌಡ ಮತ್ತಿತರರಿದ್ದರು.