ಹೊನ್ನಾವರ: ಕಾಸರಕೋಡ ಕಡಲತೀರದಲ್ಲಿ ನೀರಿನ ಶುದ್ಧತೆ, ಸುರಕ್ಷತೆ ಸೇರಿದಂತೆ ಮಾನದಂಡಗಳು ನಿರಂತರವಾಗಿದ್ದರೆ ಬ್ಲೂ್ಯ ಫ್ಲಾ್ಯಗ್ ಉಳಿಯುತ್ತದೆ. ಯಾವ ಮಾನದಂಡದಲ್ಲಿ ವ್ಯತ್ಯಾಸವಾದರೂ ಬ್ಲೂ್ಯ ಫ್ಲಾ್ಯಗ್ ಕೆಳಗಿಳಿಸಬೇಕಾಗುತ್ತದೆ. ಇದನ್ನು ಕಾಯ್ದುಕೊಳ್ಳುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಜಿಲ್ಲಾಧಿಕಾರಿ ಡಾ. ಹರೀಶಕುಮಾರ ಹೇಳಿದರು.
ತಾಲೂಕಿನ ಕಾಸರಕೋಡ ಕಡಲತೀರದಲ್ಲಿ ಸೋಮವಾರ ಬ್ಲೂ್ಯ ಫ್ಲಾ್ಯಗ್ ಆರೋಹಣ ನೆರವೇರಿಸಿ ಮಾತನಾಡಿದ ಅವರು ಡೆನ್ಮಾರ್ಕಿನ ಸಂಸ್ಥೆಯು ಮಾನದಂಡಗಳನ್ನು ಪರಿಶೀಲಿಸಿ ಪ್ರಮಾಣಪತ್ರವನ್ನು ನೀಡಿದೆ. ಕಾಸರಕೋಡ ಕಡಲತೀರದ ನಿರ್ವಹಣೆಯನ್ನು ಈಗ ಕೇಂದ್ರ ಸರಕಾರವೇ ಮಾಡುತ್ತಿದ್ದು ಮೇ 30 ರಂದು ಜಿಲ್ಲಾಡಳಿತಕ್ಕೆ ಹಸ್ತಾಂತರ ಮಾಡಲಿದೆ. ಜನರು ಮೋಜು-ಮಸ್ತಿಗೆ ಬೀಚಿಗೆ ಬರುವುದಲ್ಲ. ಪರಿಸರ ಶಿಕ್ಷಣ ದೊರೆಯಬೇಕು. ಮುಂದಿನ ದಿನಗಳಲ್ಲಿ ಜಿಲ್ಲಾಡಳಿತದ ಸಹಯೋಗದಲ್ಲಿ ವತಿಯಿಂದ ಸಮಿತಿ ಮಾಡಿ ಜನರಿಗೂ ಹೊರೆಯಾಗದಂತೆ ನಿರ್ವಹಣೆ ಮಾಡಲಾಗುತ್ತದೆ ಎಂದು ತಿಳಿಸಿದರು.ಸುದೀಪ್ ಡೋಂಗ್ರಿ ಬ್ಲೂ್ಯ ಪ್ಲಾ್ಯಗ್ ಪ್ರಮಾಣಪತ್ರವನ್ನು ಜಿಲ್ಲಾಧಿಕಾರಿ ಅವರಿಗೆ ಹಸ್ತಾಂತರಿಸಿದರು. ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರಿಯಾಂಕಾ, ಹೊನ್ನಾವರ ಅರಣ್ಯ ಇಲಾಖೆಯ ಡಿಎಫ್ಒ ಗಣಪತಿ ಕೆ., ಕಾರವಾರದ ಡಿಎಫ್ಒ ವಸಂತ ರೆಡ್ಡಿ, ಭಟ್ಕಳ ಉಪವಿಭಾಗಾಧಿಕಾರಿ ಭರತ, ಪ.ಪಂ.ಅಧ್ಯಕ್ಷ ಶಿವರಾಜ ಮೇಸ್ತ. ಉಪಾಧ್ಯಕ್ಷೆ ಮೇಧಾ ನಾಯ್ಕ, ತಾ.ಪಂ. ಸದಸ್ಯೆ ಮೀರಾ ತಾಂಡೇಲ, ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ಸತೀಶ ಮತ್ತಿತರರು ಉಪಸ್ಥಿತರಿದ್ದರು.