ಜಿಲ್ಲೆ

ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ಜೀವನ ದರ್ಶನ -31ನೇ ಮಾಸಿಕ ಕಾರ್ಯಕ್ರಮ

ಗದಗ: ಲೋಕೋದ್ಧಾರ ಮತ್ತು ಆತ್ಮೋದ್ಧಾರದ ಸೌಹಾರ್ದಯುತ ಬದುಕಿಗೆ, ಸಂಸ್ಕಾರ ಸಂವರ್ಧನೆಗೆ  ಆಧ್ಯಾತ್ಮವು ಬದುಕಿಗೆ ಪ್ರೇರಕ ಶಕ್ತಿಯಾಗುತ್ತದೆ ಎಂದು  ಶ್ರೀ ಷ.ಬ್ರ.ಅಭಿನವ ಪಂಚಾಕ್ಷರ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು.

ಅವರು ವಿವೇಕಾನಂದ ನಗರದ ಶ್ರೀ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ಜರುಗಿದ ಜೀವನ ದರ್ಶನ ೩೧ನೇ ಮಾಸಿಕ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡುತ್ತಾ ಶರಣರು ತಮ್ಮ ಜೀವನದಲ್ಲಿ ಶಿವ ತತ್ವವನ್ನು ಅಳವಡಿಕೊಂಡು ಸಮಾಜದ ಏಳಿಗೆಗಾಗಿ ಶ್ರಮಿಸಿದರು. ಜೀವನ ಮುಕ್ತಿ ಹೊಂದಲು ಆಧ್ಯಾತ್ಮಿಕ ಚಿಂತನೆ ಪ್ರವಚನಗಳು ಬಹುಮುಖ್ಯವಾಗಿದೆ ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಉಪನ್ಯಾಸಕ ಡಾ.ಶಿವಾನಂದ ಗೋಗೇರಿ ಅವರು ಶ್ರಾವಣ ಮಾಸದಲ್ಲಿ ಆ ಪರಮಾತ್ಮನ ವಾಣಿಯನ್ನು ಆಲಿಸುವುದು ಪುಣ್ಯದಾಯಕ.ಶ್ರಾವಣ ಮಾಸವು ಸಂಕ್ರಮಣದ ಕಾಲವಾಗಿದ್ದು, ಪ್ರಕೃತಿಯಲ್ಲಿ ಹಲವಾರು ಬದಲಾವಣೆಗಳು ಆಗುತ್ತವೆ. ಮಳೆಯಿಂದ ಪ್ರಕೃತಿ ಹಚ್ಚ ಹಸಿರಿನಿಂದ ಕೂಡಿದ್ದು, ಮನುಷ್ಯನೂ ಸಹ ತನ್ನ ಗುಣ ಸ್ವಭಾವ ಬದಲಾವಣೆಗೆ ಸಕಾಲವಾಗಿದೆ. ಶ್ರಾವಣ ಮಾಸದ ಆಧ್ಯಾತ್ಮಿಕ ಚಿಂತನೆಯಿಂದ ತನ್ನಲ್ಲಿನ ದುರ್ಗಣ ಹೋಗಲಾಡಿಸಿ ಸನ್ನಡತೆ ಹೊಂದಲು ಸಕಾಲವಾಗಿದೆ ಎಂದು ಉಪನ್ಯಾಸ ನೀಡಿದರು.

ನಂತರ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶ್ರೀ ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಸಮಿತಿಯ ಅಧ್ಯಕ್ಷರಾದ ಪ್ರೊ. ಎಂ ಎನ್ ಕಾಮನಹಳ್ಳಿ ಅವರು ಮಾತನಾಡಿ ಸ್ನಾನದ ಮೂಲಕ ದೇಹವನ್ನು ಶುದ್ಧೀಕರಿಸುವಂತೆ, ಲೋಭ, ಅಸೂಯೆ, ಕ್ರೋಧ ಮುಂತಾದ ಎಲ್ಲಾ ನಕಾರಾತ್ಮಕ ಭಾವನೆಗಳನ್ನು ತಿರಸ್ಕರಿಸಿ ಹೃದಯವನ್ನು ಶುದ್ಧೀಕರಿಸಬಹುದು ಎಂದು ಹೇಳಿ ಜೀವನ ದರ್ಶನ ಕಾರ್ಯಕ್ರಮ ಯಶಸ್ವಿಯಾಗಿ ನಡೆಯುತ್ತಿದೆ ಇದಕ್ಕೆ ಕಾರಣೀಭೂತರಾದ ಪ್ರತಿಯೊಬ್ಬರಿಗೂ ಧನ್ಯವಾದಗಳನ್ನು ಅರ್ಪಿಸಿದರು.

ನಂತರ ಪ್ರಸಾದ ಭಕ್ತಿ ಸೇವೆ ಹಮ್ಮಿಕೊಂಡಿದ್ದ ಬಿ.ವಿ. ರಬನಾಳ, ಡಾ. ಎಂ.ಕೆ. ಪೂಜಾರರವರನ್ನು ಸಮಿತಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಸಂಗೀತ ವಿದ್ವಾನ್ ಮಣಕವಾಡ ಗುರುಗಳಿಂದ ಸಂಗೀತ ಭಕ್ತಿ ಸೇವೆ ಜರುಗಿತು.

 ಶ್ರೀಮತಿ ಕಸ್ತೂರಿಬಾಯಿ ಕಮ್ಮಾರರವರ ಪ್ರಾರ್ಥನಾ ಗೀತೆ ಮೂಲಕ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು.ಕೋಶಾಧ್ಯಕ್ಷರಾದ ಎಂ.ಬಿ. ಚೆನ್ನಪ್ಪಗೌಡರ ಸ್ವಾಗತ ಹಾಗೂ ಪರಿಚಯ ಭಾಷಣ ಮಾಡಿದರು.ಕಾರ್ಯಕ್ರಮದ ನಿರೂಪಣೆಯನ್ನು  ಸಮಿತಿಯ ಕಾರ್ಯದರ್ಶಿಗಳಾದ ಕೆ.ಆಯ್. ಕುರುಗೋಡ ನಿರೂಪಣೆ ಮಾಡಿದರು. ಕಾರ್ಯಕ್ರಮದಲ್ಲಿ ಗೌರವಾಧ್ಯಕ್ಷರಾದ ಜಿ.ಜಿ. ಕುಲಕರ್ಣಿ, ಉಪಾಧ್ಯಕ್ಷರಾದ ಬಸವರಾಜ ಸುಂಕದ,ಸಹ ಕಾರ್ಯದರ್ಶಿ ಎಂ. ಕೆ. ಲಕ್ಕುಂಡಿ, ಕೋಶಾಧ್ಯಕ್ಷರಾದ ಎಂ.ಬಿ. ಚೆನ್ನಪ್ಪಗೌಡರ್, ಸಹಕೋಶಾಧ್ಯಕ್ಷರಾದ ಆರ್.ಬಿ.ಒಡೆಯರ, ನಿರ್ದೇಶಕರಾದ ವಿ. ಆರ್. ಕುಲಕರ್ಣಿ, ಅಮರೇಶ್ ಹಾದಿ, ಕಾರ್ತಿಕ್ ಮಡಿವಾಳರ್ ಮಹಾದೇವಿ ಗೋಗೇರಿ, ರಾಧಿಕಾ ಬಂದಂ, ಬಸವರಾಜ ಹಿರೇಮಠ,ಪ್ರಭಯಸ್ವಾಮಿ ಹಿರೇಮಠ ಹಾಗೂ ಅಪಾರ ಭಕ್ತಾದಿಗಳು ಪಾಲ್ಗೊಂಡಿದ್ದರು.