ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಬಾಗಲಕೋಟೆ ಎಸ್ಪಿ ಕಚೇರಿಗೆ ಆಗಮಿಸಿ ಎಸ್ಪಿ ಅಮರನಾಥ ರೆಡ್ಡಿ ಅವರಿಗೆ ಮನವಿ ಸಲ್ಲಿಸಿದರು. ಸಂಸದ ಪಿ.ಸಿ.ಗದ್ದಿಗೌಡರ ಇದ್ದರು. 
ಜಿಲ್ಲೆ

ಕಾಶಪ್ಪನವರ ವಿರುದ್ದ ಅಧಿಕಾರ ದುರುಪಯೋಗ ಆರೋಪ

ಬಾಗಲಕೋಟೆ: ಹುನಗುಂದ ಮತಕ್ಷೇತ್ರದಲ್ಲಿ ಶಾಸಕ ವಿಜಯಾನಂದ ಕಾಶಪ್ಪನವರ ದ್ವೇಷದ ರಾಜಕೀಯ ಮಾಡುತ್ತಿದ್ದಾರೆ. ತಮ್ಮ ರಾಜಕೀಯ ವಿರೋಧಿಗಳ ವಿರುದ್ದ ಸುಳ್ಳು ಮೊಕದ್ದಮೆ ಹಾಕಿಸುತ್ತಿದ್ದಾರೆ ಎಂದು ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಆರೋಪಿಸಿದ್ದಾರೆ.

ಇದೇ ವಿಚಾರವಾಗಿ ಶನಿವಾರ ಮಧ್ಯಾಹ್ನ ತಮ್ಮ ಬೆಂಬಲಿಗರು ಹಾಗೂ ಸಂಸದ ಪಿ.ಸಿ.ಗದ್ದಿಗೌಡರ ಜೊತೆ ಬಾಗಲಕೋಟೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಗೆ ಆಗಮಿಸಿ, ಶಾಸಕರ ಅಧಿಕಾರ ದುರುಪಯೋಗದ ಬಗ್ಗೆ ಮನವಿ ಸಲ್ಲಿಸಿದ್ದಾರೆ.

ಹುನಗುಂದ ಕ್ಷೇತ್ರದಲ್ಲಿ ಶಾಸಕರು ಸೇಡಿನ ರಾಜಕೀಯ ಮಾಡುತ್ತಿದ್ದಾರೆ. ಅದಕ್ಕೆ ತಕ್ಕಂತೆ ಪೊಲೀಸ್ ಅಽಕಾರಿಗಳು ಕೆಲಸ ಮಾಡುತ್ತಿದ್ದಾರೆ. ಜೊತೆಗೆ ಕ್ಷೇತ್ರದಲ್ಲಿ ಅವ್ಯಾಹತವಾಗಿ ಜೂಜಾಟ, ಅಕ್ರಮ ಮರಳುಗಾರಿಕೆ ನಡೆಯುತ್ತಿದೆ. ಇದಕ್ಕೆ ಕಡಿವಾಣಿ ಎನ್ನುವುದು ಇಲ್ಲವಾಗಿದೆ ಎಂದು ಆರೋಪಿಸಿದರು.

ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ, ಸಣ್ಣಪುಟ್ಟ ಗಲಾಟೆ ನಡೆದಾಗ ಅಲ್ಲಿ ಇರದೇ ಇದ್ದರೂ ರಾಜಕೀಯ ವಿರೋಧಿ ಎನ್ನುವ ಕಾರಣಕ್ಕೆ ೩೦೭ ಕೇಸ ಹಾಕಿಸಿದ್ದಾರೆ. ಮತ್ತೊಬ್ಬ ಬಿಜೆಪಿ ಕಾರ್ಯಕರ್ತನ ಮೇಲೆ ಜಾತಿ ನಿಂಧನೆ ಕೇಸ್ ಮಾಡಿಸಿದ್ದಾರೆ. ಇಂತ ಹಲವು ಪ್ರಕರಣ ಕ್ಷೇತ್ರ ನಡೆಯುತ್ತಲೇ ಇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಜನರಿಗೆ ರಕ್ಷಣೆ ಕೊಡಬೇಕಿದ್ದ ಆರಕ್ಷರು ಶಾಸಕರ ಅಣತಿಯಂತೆ ನಡೆದುಕೊಳ್ಳುವುದು ಸರಿಯಲ್ಲ ಎಂದರು.

ಮಾಜಿ ಜಿಪಂ ಸದಸ್ಯ ವೀರೇಶ ಉಂಡೋಡಿ, ಎಂ.ಎಲ್.ಶಾಂತಗೇರಿ, ಮಹಾಂತಗೌಡ ಪಾಟೀಲ, ಮಂಜು ಚಟ್ನಿ, ಬಸವರಾಜ ಹೊಸೂರ, ರಾಜಕುಮಾರ ಬಾದವಾಡಗಿ, ಅಪ್ಪು ಆಲೂರ, ಮಹಾಂತಪ್ಪ ಚನ್ನಿ ಮತ್ತಿತರರು ಇದ್ದರು.