ಬೈಲಕುಪ್ಪೆ: ಸಮೀಪದ ಕೊಪ್ಪ ಗ್ರಾಮದ ಬಿ.ಎಂ.ರಸ್ತೆ ಪಕ್ಕದ ಕಾವೇರಿ ನದಿ ದಡದಲ್ಲಿ ಭಾರವಿ ಕಾವೇರಿ ಕನ್ನಡ ಸಂಘದ ವತಿಯಿಂದ ನಿರ್ಮಿಸಿರುವ ಕಾವೇರಿ ಮಾತೆಗೆ 142ನೇ ಬನದ ಹುಣ್ಣಿಮೆ ಪ್ರಯುಕ್ತ ಸೋಮವಾರ ವಿಶೇಷ ಪೂಜೆ ಸಲ್ಲಿಸಲಾಯಿತು.
ಸೇವಾರ್ಥದಾರರಾದ ಕೊಪ್ಪ ಕಾವೇರಿ ಸ್ತ್ರೀ ಶಕ್ತಿ ಸ್ವಸಾಯ ಸಂಘದ ವತಿಯಿಂದ ಸಂಘದ ಅಧ್ಯಕ್ಷ ಬೇಬಿಂದ್ರ ಪ್ರಸಾದ್ ಸಮ್ಮುಖದಲ್ಲಿ ವಿಶೇಷ ಪೂಜೆಗಳು ನಡೆದವು. ಅರ್ಚಕ ಪುರುಷೋತ್ತಮ ಭಟ್ಟ ಅವರು ಕಾವೇರಿ ನದಿಯಿಂದ ನೀರನ್ನು ತಂದು ಸ್ವಚ್ಛಗೊಳಿಸಿ ಹೊಸ ಸೀರೆ, ಕುಪ್ಪಸ, ಒಡವೆಗಳನ್ನು ಧರಿಸಿ, ವಿವಿಧ ಹೂಗಳಿಂದ ಅಲಂಕರಿಸಿ ಎಡೆ ನೈವೇದ್ಯ ಸಲ್ಲಿಸಿ ಮಹಾ ಮಂಗಳಾರತಿ ನೆರವೇರಿಸಿದರು.
ಮಕರ ಸಂಕ್ರಾಂತಿ ಪ್ರಯುಕ್ತ ಅಯ್ಯಪ್ಪ ಸ್ವಾಮಿ ಭಕ್ತರು ಕಾವೇರಿ ಮಾತೆಯ 18 ಮೆಟ್ಟಿಲುಗಳಿಗೆ ದೀಪ ಹಚ್ಚಿ ಪಡಿ ಪೂಜೆ ನೆರವೇರಿಸಿದರು. ಜನರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.
ಸಂಘದ ಪದಾಧಿಕಾರಿಗಳಾದ ವಿಜೇಂದ್ರ ಪ್ರಸಾದ್, ರವೀಂದ್ರ ಪ್ರಸಾದ್, ಚಂದ್ರು, ಸ್ಥಳೀಯರಾದ ರುದ್ರೇಶ್, ಮುತ್ತಯ್ಯ, ರಾಜಣ್ಣ, ಸೋಮಯ್ಯ. ಶ್ರೀನಿವಾಸ್, ಶಾಂತಪ್ಪನ್, ಸೋಮಶೇಖರ್, ಚಂದ್ರು, ಮಹಾಲಿಂಗ ಸ್ವಾಮಿ, ಪುಟ್ಟರಾಜ್, ಸ್ತ್ರೀ ಶಕ್ತಿ ಸಂಘದ ಪದಾಧಿಕಾರಿಗಳಾದ ಸಿಂಧು, ಯಶೋದಾ, ಪೃಥ್ವಿ, ಮೈನಾ, ಕವಿತಾ, ದಾಕ್ಷಾಯಿಣಿ, ಮೌನಿಕಾ, ಭವ್ಯಾ, ಗಾಯತ್ರಿ, ನಿವೇದಿತಾ, ಶೋಭಾ ಇದ್ದರು.