ಜಿಲ್ಲೆ

ಕಾವೇರಿ ತಂತ್ರಾಂಶ ಆಸ್ತಿ ನೋಂದಣಿ ಆರಂಭ

ಹೊಳೆನರಸೀಪುರ : ಕಾವೇರಿ 2.0 ಆನ್‌ಲೈನ್ ತಂತ್ರಾಂಶ ಅಳವಡಿಕೆಯಿಂದ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಸಾರ್ವಜನಿಕರಿಗೆ ಸಾಕಷ್ಟು ಅನುಕೂಲವಾಗಲಿದೆ ಎಂದು ಜಿಲ್ಲಾ ನೋಂದಣಾಧಿಕಾರಿ ನಿಧಿ ನುಡಿದರು.
ಪಟ್ಟಣದ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಹೊಸದಾಗಿ ಆರಂಭಿಸಿರುವ ಕಾವೇರಿ 2.0 ತಂತ್ರಾಂಶಕ್ಕೆ ಚಾಲನೆ ನೀಡಿ ಮಾತನಾಡಿದರು.
ನೋಂದಣಿಗೆ ಈ ಹಿಂದೆ ಅನೇಕ ತಾಂತ್ರಿಕ ಅಡಚಣೆಗಳು ಇದ್ದವು. ಇದೀಗ ಆನ್‌ಲೈನ್ ತಂತ್ರಾಂಶದಲ್ಲಿ ಎಲ್ಲ ಅಡೆ ತಡೆ ನಿವಾರಿಸಿಕೊಂಡು ಕೇವಲ 15 ನಿಮಿಷದೊಳಗೆ ನೋಂದಣಿ ಮಾಡಿಸಿಕೊಳ್ಳಬಹುದು ಎಂದರು.
ಉಪ ನೋಂದಣಾಧಿಕಾರಿ ದಿನಕರ್ ಮಾತನಾಡಿ, ತ್ವರಿತ ನೋಂದಣಿಗೆ ಹೊಸ ಅನ್‌ಲೈನ್ ತತ್ರಾಂಶ ಸಹಕಾರಿಯಾಗಿದೆ. ಅವಶ್ಯವಿರುವ ದಾಖಲೆಗಳನ್ನು ಆನ್‌ಲೈನ್ ಮೂಲಕ ನೋಂದಣಿ ಮಾಡಿಸಿಕೊಳ್ಳಬಹುದು ಎಂದರು.

.