filter: 0; fileterIntensity: 0.0; filterMask: 0; captureOrientation: 0; algolist: 0; multi-frame: 1; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: weather?null, icon:null, weatherInfo:100;temperature: 41; 
ಜಿಲ್ಲೆ

ಕಾವೇರಿ ಒಡಲು ಸೇರುತ್ತಿದೆ ಕೊಳಚೆ

ಕೊಳ್ಳೇಗಾಲ : ಅಧಿಕಾರಿಗಳು, ಜನಪ್ರತಿನಿಧಿಗಳ ನಿರ್ಲಕ್ಷೃದಿಂದ ಜೀವನದಿ ಕಾವೇರಿ ನದಿಯ ಒಡಲಿಗೆ ಯುಜಿಡಿ, ಚರಂಡಿ ಹಾಗೂ ಕುಲುಷಿತ ನೀರು ಸೇರುತ್ತಿದೆ. ಇದರಿಂದ ಕುಡಿಯುವ ನೀರಿನ ಮೂಲವಾದ ಕಾವೇರಿ ನದಿ ಮಲಿನವಾಗುತ್ತಿದೆ.

ಕೊಳ್ಳೇಗಾಲ ಪಟ್ಟಣದ ಯುಜಿಡಿ ಹಾಗೂ ಚರಂಡಿ ನೀರು ಪಟ್ಟಣ ವ್ಯಾಪ್ತಿಯಲ್ಲಿ ಬರುವ ಕೊಂಗಳಕೆರೆ, ಚಿಕ್ಕರಂಗನಾಥ ಕೆರೆ, ತಟ ಕೆರೆಗಳಿಗೆ ಸೇರುತ್ತಿದೆ. ಸರ್ಕಾಟನ್ ಕಾಲುವೆ ಹಾಗೂ ಕುಪ್ಪಮ್ಮ ಕಾಲುವೆ ಮೂಲಕ ಹರಿದು ಸರಾಗವಾಗಿ ದಾಸನಪುರ ಹಾಗೂ ಹರಳೆ ಗ್ರಾಮದ ನಡುವಿನ ಗಡಿಯಲ್ಲಿ ಕಾವೇರಿ ನದಿ ಸೇರುತ್ತಿದೆ ಎಂದು ರೈತರು ನಗರಸಭೆ ಅಧಿಕಾರಿಗಳ ವಿರುದ್ಧ ಅಕ್ರೋಶ ಹೊರಹಾಕಿದ್ದಾರೆ.

ಕೆರೆ, ಕಾವೇರಿ ನದಿ ಒಡಲಿಗೆ ಯುಜಿಡಿ, ಚರಂಡಿ ನೀರು ನೇರವಾಗಿ ಹರಿಯುತ್ತಿದೆ. ಈ ಬಗ್ಗೆ ನಗರಸಭೆ ಸದಸ್ಯೆ ಜಯಮೇರಿ ನ.11 ರಂದು ನಗರಸಭೆ ಪೌರಾಯುಕ್ತರಿಗೆ ದೂರು ನೀಡಿದ್ದಾರೆ. ನಿಯಮದಂತೆ ಯುಜಿಡಿ ಸಂಸ್ಕರಣಾ ಘಟಕದಲ್ಲಿ ಯುಜಿಡಿ ಹಾಗೂ ಚರಂಡಿ ನೀರು ಶುದ್ಧೀಕರಣ ಆಗಬೇಕು. ನಂತರ, ಶುದ್ಧಿಯಾದ ನೀರನ್ನು ರೈತರ ಜಮೀನಿಗೆ ನೀಡಬೇಕು. ಆದರೆ, ಶುದ್ಧೀಕರಣ ಯಂತ್ರ ಕೆಟ್ಟು ಹೋಗಿದೆ. ಆದ್ದರಿಂದ ಈ ಕೊಳಚೆಯನ್ನು ಕಾವೇರಿ ನದಿಗೆ ಬಿಡಲಾಗುತ್ತಿದೆ. ಇದು ಜನರ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರಲಿದೆ. ಆದ್ದರಿಂದ ಕೂಡಲೇ ಸಂಸ್ಕರಣಾ ಘಟಕದ ಯಂತ್ರ ರಿಪೇರಿ ಮಾಡಿಸಿ ಯುಜಿಡಿ, ಚರಂಡಿ ನೀರು ಶುದ್ಧೀಕರಿಸಿ ರೈತರಿಗೆ ನೀಡಬೇಕು. ಇಲ್ಲವೆ ಹೋರಾಟ ಮಾಡುವುದಾಗಿ ಸದಸ್ಯೆ ಜಯಮೇರಿ ಎಚ್ಚರಿಕೆ ನೀಡಿದರು.

ಕೆರೆಗಳಲ್ಲಿ ಶೇಖರಣೆಗೊಂಡ ಕಲುಷಿತ ನೀರು ಕುಪ್ಪಮ್ಮ ಕಾಲುವೆ ಮೂಲಕ ಹರಿಯುತ್ತಿದೆ. ಮಾರ್ಗಮಧ್ಯೆ ಇದನ್ನೆ ರೈತರು ಜಮೀನಿಗೆ ಬಳಸುತ್ತಾರೆ. ಈ ನೀರು ಬಳಸಿ ಬೆಳೆದ ಆಹಾರ ವಿಷಕಾರಿಯಾಗಲಿದೆ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.

ಗುಂಡಾಲ್ ಜಲಾಶಯ ವ್ಯಾಪ್ತಿಗೆ 9 ಕೆರೆಗಳು ಬರುತ್ತವೆ. ಇದರಲ್ಲಿ ಚಿಕ್ಕರಂಗನಾಥ, ತಟಕೆರೆ, ಕೊಂಗಳಕೆರೆಗೆ ಕೊಳ್ಳೇಗಾಲ ಪಟ್ಟಣದ ಯುಜಿಡಿ, ಚರಂಡಿ ನೀರು ಬಿಡಲಾಗುತ್ತಿದೆ. ಈ ನೀರು ಕುಪ್ಪಮ್ಮ ಕಾಲುವೆ ಮೂಲಕ ಕಾವೇರಿ ನದಿ ಸೇರುತ್ತಿದೆ. ಇದರಿಂದ ರೈತರ ಫಸಲು ಹಾಳಾಗುತ್ತಿದೆ. ಸರ್ಕಾರದ ಭಾಗವಾಗಿರುವ ಉನ್ನತ ಅಧಿಕಾರಿಗಳಿಗೆ ದೂರು ನೀಡಿದ್ದೇವೆ. ನಗರಸಭೆ ಅಧಿಕಾರಿಗಳ ಮೇಲೆ ಕ್ರಮವಾಗಿಲ್ಲ. ಜಿಲ್ಲಾಡಳಿತ ಹಾಗೂ ನಗರಸಭೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ಅನಾಹುತ ಆಗುತ್ತಿದೆ. ಮುಂದಿನ ದಿನಗಳಲ್ಲಿ ಕೋರ್ಟ್ ಮೊರೆ ಹೋಗಿ ಕಾನೂನು ಹೋರಾಟ ಮಾಡುತ್ತೇವೆ. ದಶರಥ್, ಗುಂಡಾಲ್ ಜಲಾಶಯ ಹಳೇ ಸ್ಥಿರ ಅಚ್ಚುಕಟ್ಟು ಹಿತರಕ್ಷಣಾ ಸಮಿತಿ ಅಧ್ಯಕ್ಷ, ಕೊಳ್ಳೇಗಾಲ ಯುಡಿಜಿ ಸಂಸ್ಕರಣಾ ಘಟಕದಲ್ಲಿ 9 ಯಂತ್ರಗಳಿವೆ. ಈ ಪೈಕಿ 3 ಯಂತ್ರಗಳು ಕೆಟ್ಟಿವೆ. ರಿಪೇರಿ ಮಾಡಿಸುತ್ತೇವೆಂದು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ. ಯುಜಿಡಿ ಹಾಗೂ ಚರಂಡಿ ನೀರು ಶುದ್ಧೀಕರಣವಾಗದೆ ಕುಪ್ಪಮ್ಮ ಕಾಲುವೆ ಮೂಲಕ ಕಾವೇರಿ ಸೇರುತ್ತಿರುವುದನ್ನು ಪರಿಶೀಲಿಸಲಾಗುವುದು. ಎ.ರಮೇಶ್, ನಗರಸಭೆ ಪೌರಾಯುಕ್ತ ಕೊಳ್ಳೇಗಾಲ