ದಾವಣಗೆರೆ: ನಗರದ ಕಾಳಿಕಾದೇವಿ ರಸ್ತೆಯ ಶ್ರೀ ಕಾಳಿಕಾಂಬ ವಿಶ್ವಕರ್ಮ ದೇವಸ್ಥಾನದಲ್ಲಿ ಅಧಿಕ ಶ್ರಾವಣ ಮಾಸದ ಹಿನ್ನೆಲೆಯಲ್ಲಿ ಇತ್ತೀಚೆಗೆ
ಶ್ರೀ ಅಮ್ಮನವರಿಗೆ ದುರ್ಗಾ ದೀಪಾರಾಧನೆ, ದೇವಿಗೆ 33 ವಿಧದ ನೈವೇದ್ಯ ಭಕ್ಷ್ಯ, ಫಲಪುಷ್ಪ, ಧನಧಾನ್ಯ, ಸಿಹಿಖಾದ್ಯ ಪದಾರ್ಥಗಳೊಂದಿಗೆ ಅಮ್ಮನವರಿಗೆ ವಿಶೇಷ ಪೂಜೆ ನೆರವೇರಿಸಲಾಯಿತು.
ಶ್ರೀ ಕಾಳಿಕಾದೇವಿ ಭಜನಾ ಮಂಡಳಿಯವರಿಂದ ವಿಷ್ಣು ಸಹಸ್ರನಾಮ, ಲಲಿತಾ ಸಹಸ್ರನಾಮ ಪಾರಾಯಣ ನಡೆಸಲಾಯಿತು.
ಉಮಾ ನಾಗರಾಜ್,ಶ್ರೀದೇವಿ ಅಮರಾವತಿ, ಅಗಡಿ ಶಶಿಕಲಾ, ಸರಸ್ವತಿ ವಸಂತಕುಮಾರ್ ಹಾಗೂ ಭಜನಾ ಮಂಡಳಿಯ ಮಹಿಳೆಯರು ಪೂಜಾ ಕಾರ್ಯದಲ್ಲಿ ಭಾಗವಹಿಸಿದ್ದರು. ದೇವಸ್ಥಾನದ ಅರ್ಚಕ ಟೀಕಾಚಾರ್ ವಿಶೇಷ ಪೂಜೆ ನೆರವೇರಿಸಿದರು