ಕಾಳಗಿ: ದೇವನೊಬ್ಬನೇ ಎಂದು ಜಗತ್ತಿಗೆ ಸಂದೇಶ ಸಾರಿ, ದಲಿತರು, ಹಿಂದುಳಿದವರು, ಶೋಷಿತರ ಪರವಾಗಿ ಹೋರಾಟ ಮಾಡಿ ಕ್ರಾಂತಿಕಾರಕ ಬೆಳವಣಿಗೆಗೆ ಕಾರಣಿಭೂತರಾದ ಮಹಾನ್ ಸಂತ ನಾರಾಯಣ ಗುರುಗಳು ಎಂದು ಇಲ್ಲಿಯ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ವೆಂಕಟೇಶ್ ತೆಲಂಗ ತಿಳಿಸಿದರು.
ಇಲ್ಲಿಯ ಪಟ್ಟಣ ಪಂಚಾಯಿತಿ ಕಾರ್ಯಾಲಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ನಾರಾಯಣ ಗುರುಗಳ ೧೬೯ನೇ ಜಯಂತಿ ನಿಮಿತ್ತ ಅವರು, ಕಾರ್ಯಾಲಯದಲ್ಲಿ ಬ್ರಹ್ಮ ಶ್ರೀ ನಾರಾಯಣಗುರುಗಳ ಹಾಗೂ ನುಲಿಯ ಚಂದ್ರಯ್ಯ ನವರ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡಿ ಅವರು ಮಾತನಾಡಿದ ಅವರು, ನಾರಾಯಣ ಗುರುಗಳ ತತ್ವ ಸಿದ್ದಾಂತಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಮುಖಂಡರಾದ ರಾಘವೇಂದ್ರ ಗುತ್ತೇದಾರ, ಶಿವಶರಣಪ್ಪ ಗುತ್ತೇದಾರ, ನೀಲಕಂಠ ಮಡಿವಾಳ, ಮಂಜುನಾಥ ಹೆಬ್ಬಾಳ, ನಿಂಗಯ್ಯ ಸುಂಠಾಣ, ಅನಿಲಕುಮಾರ ಗುತ್ತೇದಾರ, ಚಂದ್ರಯ್ಯ, ರಾಜಕುಮಾರ ಗುತ್ತೇದಾರ, ಪ್ರಶಾಂತ್ ಕದಂ, ಗುರಯ್ಯ ಸುಂಠಾಣ, ಜಗನ್ನಾಥ ಚಂದನಕೇರಿ, ಶಿವುಕುಮಾರ ಚಿಂತಕೋಟಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಕಾಳಗಿ ತಾಲೂಕಿನ ಸೂಗುರ(ಕೆ) ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಹಾಗೂ ನುಲಿಯ ಚಂದಯ್ಯನವರ ಜಯಂತೋತ್ಸವ ಆಚರಣೆ ಮಾಡಲಾಯಿತು. ಇದೇ ವೇಳೆ ಶಾಲೆಯ ಮುಖ್ಯಗುರು ಜಗನ್ನಾಥ ನಾರಾಯಣ ಗುರು ಹಾಗೂ ನೂಲಿಯ ಚಂದಯ್ಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿದರು. ಶಿಕ್ಷಕರಾದ ಲಕ್ಷ್ಮೀ, ಜಗನ್ನಾಥ ಬಿರೆದಾರ, ಶ್ರೀಧರ ಬಳಿಗೇರಿ, ರಾಘವೇಂದ್ರ, ನಿಂಗಣಪ್ಪ ನಾಗೂರೆ, ಸೇರಿದಂತೆ ಶಾಲೆ ಸಿಬ್ಬಂಧಿಗಳು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.