ಕಲಬುರಗಿ: ಬೆಂಗಳೂರಿನಲ್ಲಿ ಐಪಿಎಲ್ ಚಾಂಪಿಯನ್ ಆರ್ಸಿಬಿ ವಿಜಯೋತ್ಸವ ವೇಳೆ ಸಂಭವಿಸಿದ ಕಾಲ್ತುಳಿತಕ್ಕೆ ರಾಜ್ಯ ರ‍್ಕಾರ ಜವಾಬ್ದಾರಿ ಹೊತ್ತಿದ್ದು, ರಾಜೀನಾಮೆ ಕೊಡ್ತೀವಿ. ಅದೇ ಮಾನದಂಡ ಕುಂಭಮೇಳದ ಕಾಲ್ತುಳಿತಕ್ಕೆ ಯೋಗಿ ಆದಿತ್ಯನಾಥ್, ಪಹಲ್ಗಾಮ್ ದಾಳಿ ವೈಲ್ಯಕ್ಕೆ ಅಮಿತ್ ಷಾ, ರಕ್ಷಣಾ ಸಚಿವರಿಗೆ ಅನ್ವಯ ಆಗುತ್ತಾ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ರ‍್ಖಗೆ ಪ್ರಶ್ನಿಸಿದರು.
ಕಾಲ್ತುಳಿತದ ಬಗ್ಗೆ ಸಿಎಂ, ಡಿಸಿಎಂ ಸ್ಪಷ್ಟನೆ ನೀಡಿದ್ದಾರೆ. ೧೮ ರ‍್ಷದ ನಂತರ ಆರ್ಸಿಬಿ ಗೆಲುವು ಸಾಧಿಸಿದ್ದು ಹೆಮ್ಮೆ ವಿಷಯ. ೨೪ ಗಂಟೆಯೊಳಗೆ ತಂಡ ನಗರಕ್ಕೆ ಬಂದಿದ್ದರಿಂದ ವಿಜಯೋತ್ಸವಕ್ಕೆ ಗೃಹ ಇಲಾಖೆ ಅನುಮತಿ ನಿರಾಕರಿಸಿತ್ತು. ಆದರೂ ಮರ‍್ನಾಲ್ಕು ಲಕ್ಷ ಅಭಿಮಾನಿಗಳು ಜಮಾಯಿಸಿದ್ದರಿಂದ ಲೋಪ ಆಗಿದೆ. ಬೇರೆ ರಾಜ್ಯಗಳಲ್ಲಿ ಇಂತಹ ಘಟನೆ ನಡೆದಾಗ ಅಲ್ಲಿನ ರ‍್ಕಾರ ಏನು ಮಾಡಿದೆ ತಿಳಿದುಕೊಳ್ಳಲಿ ಎಂದು ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಗುಜರಾತ್, ಬಿಹಾರ್ಗಳಲ್ಲಿ ಸೇತುವೆಗಳು ಕುಸಿದವು. ಕುಂಭಮೇಳದಲ್ಲಿ ಕಾಲ್ತುಳಿತವಾಯಿತು. ಕುಂಭಮೇಳದಲ್ಲಿ ಆಗಿದ್ದು ರ‍್ಕಾರಿ ಪ್ರಾಯೋಜಿತ ಅಲ್ವಾ? ಜನರು ಸತ್ತಾಗ ಮಹಾಸಂಗಮ ಎಂದರು. ರಾಜೀನಾಮೆ ಎಲ್ಲದಕ್ಕೂ ಇರಬೇಕಲ್ಲವೇ? ಕುಂಭಮೇಳದಲ್ಲಿ ಲೋಪ ಆದಾಗ ಜವಾಬ್ದಾರಿ ಹೊರಲಿಲ್ಲ. ಆದರೆ ನಾವು ಜವಾಬ್ದಾರಿ ಹೊತ್ತಿದ್ದೇವೆ. ಲೋಪಗಳನ್ನು ಸರಿಪಡಿಸಲಾಗುತ್ತಿದೆ ಎಂದು ತಿಳಿಸಿದರು.
ವಿಜಯೋತ್ಸವ ರ‍್ಯಾಲಿಗೆ ಅನುಮತಿ ನಿರಾಕರಿಸಿದಾಗ ಬಿಜೆಪಿಗರು ವಿರೋಧಿಸಿದ್ದರು. ಇದೀಗ ಲೋಪ ಎನ್ನುತ್ತಾರೆ. ಇಂತಹ ಟನೆ ಮರುಕಳಿಸದಂತೆ ನಿಯಮ ರೂಪಿಸಲು ನರ‍್ಧರಿಸಲಾಗಿದೆ. ಟನೆ ಲೋಪಕ್ಕೆ ಕಾರಣರಾದ ಸಂಬಂಧಿತ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಭಿನ್ನ ಆಯಾಮಗಳಿಂದ ತನಿಖೆ ನಡೆಸುತ್ತಿದ್ದು, ಅಧಿಕಾರಿಗಳು ಸೇರಿ ಯಾರೇ ಇದ್ದರೂ ರಸುವ ಪ್ರಶ್ನೆ ಇಲ್ಲ ಎಂದು ಪ್ರಿಯಾಂಕ್ ಸ್ಪಷ್ಟಪಡಿಸಿದರು.
ಶಾಸಕ ಅಲ್ಲಮಪ್ರಭು ಪಾಟೀಲ್, ಡಾ.ಕಿರಣ ದೇಶಮುಖ ಇತರರಿದ್ದರು.