ವಿಜಯಪುರ: ಮಹಾಮಾರಿ ಕರೊನಾ ಅಟ್ಟಹಾಸದ ನಡುವೆಯೇ ಆರಂಭಗೊಂಡ ಮಹಾವಿದ್ಯಾಲಯಗಳ ವಿದ್ಯಾರ್ಥಿಗಳಿಗೆ ಇದೀಗ ಕರೊನಾ ಶಾಕ್ ನೀಡಿದೆ !
ನ.17 ರಿಂದ ರಾಜ್ಯಾದ್ಯಂತ ಶಾಲೆ ಕಾಲೇಜ್ ಆರಂಭಗೊಂಡಿದ್ದು ಎಲ್ಲ ಕಡೆ ಕರೊನಾ ಪರೀಕ್ಷೆ ನಡೆದಿದೆ. ಆದರೆ, ಶಿಕ್ಷಕರು ಮತ್ತು ವಿದ್ಯಾರ್ಥಿಗಳಲ್ಲಿ ಕರೊನಾ ಕಾಣಿಸಿಕೊಂಡಿದ್ದು ಇನ್ನುಳಿದವರಲ್ಲಿ ಆತಂಕ ಹೆಚ್ಚಿಸಿದೆ.
ಜಿಲ್ಲೆಯಲ್ಲಿ ಈವರೆಗೆ 283 ಶಿಕ್ಷಕರನ್ನು ಪರೀಕ್ಷೆಗೊಳಪಡಿಸಲಾಗಿದ್ದು ಆ ಪೈಕಿ 6 ಶಿಕ್ಷಕರಿಗೆ ಪಾಸಿಟಿವ್ ಬಂದಿದೆ.
3541 ವಿದ್ಯಾರ್ಥಿಗಳನ್ನು ಚಿಕಿತ್ಸೆಗೆ ಒಳಪಡಿಸಲಾಗಿದ್ದು ಆ ಪೈಕಿ 10 ವಿದ್ಯಾರ್ಥಿಗಳಿಗೆ ಪಾಸಿಟಿವ್ ಬಂದಿದೆ. ಪರೀಕ್ಷೆ ಮುಂದುವರಿದಿದ್ದು ಇನ್ನು ಎಷ್ಟು ಜನರು ಸೋಂಕಿಗೊಳಪಟ್ಟಿದ್ದಾರೋ ಕಾದು ನೋಡಬೇಕಿದೆ.