filter: 0; jpegRotation: 0; fileterIntensity: 0.000000; filterMask: 0; module:1facing:0; hw-remosaic: 0; touch: (-1.0, -1.0); modeInfo: ; sceneMode: Hdr; cct_value: 0; AI_Scene: (200, -1); aec_lux: 0.0; hist255: 0.0; hist252~255: 0.0; hist0~15: 0.0; 
ಜಿಲ್ಲೆ

ಕಾಲೇಜು ಬಳಿ ಬಸ್ ನಿಲುಗಡೆಗೆ ಸೂಚನೆ

ಅರಕಲಗೂಡು: ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬಳಿ ಕೆಎಸ್‌ಆರ್‌ಟಿಸಿ ಬಸ್‌ಗಳ ನಿಲುಗಡೆ ಮಾಡಬೇಕು ಎಂದು ಶಾಸಕ ಎ. ಮಂಜು ಚಾಲಕ, ನಿರ್ವಾಹಕರಿಗೆ ತಾಕೀತು ಮಾಡಿದರು.

ಕಾಲೇಜಿಗೆ ಸೋಮವಾರ ಭೇಟಿ ನೀಡಿದ ಸಂದರ್ಭದಲ್ಲಿ ಬಸ್‌ಗಳನ್ನು ನಿಲ್ಲಿಸದಿರುವ ಕುರಿತು ವಿದ್ಯಾರ್ಥಿಗಳು ಗಮನಕ್ಕ ತಂದ ಹಿನ್ನೆಲೆಯಲ್ಲಿ ಕಾಲೇಜಿನ ರಸ್ತೆ ಮುಂಭಾಗ ವಿದ್ಯಾರ್ಥಿಗಳೊಂದಿಗೆ ಧಾವಿಸಿ ಬಸ್‌ಗಳನ್ನು ತಡೆದು ಚಾಲಕ ನಿರ್ವಾಹಕರಿಗೆ ತಿಳಿ ಹೇಳಿದರು. ಡಿಪೋ ಪ್ರಭಾರಿ ವ್ಯವಸ್ಥಾಪಕಿ ರೂಪಾ ಅವರನ್ನು ಸ್ಥಳಕ್ಕೆ ಕರೆಸಿ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಈ ಮಾರ್ಗದಲ್ಲಿ ಓಡಾಡುವ ಎಲ್ಲ ಗ್ರಾಮೀಣ ಸಾರಿಗೆ ಬಸ್‌ಗಳ ನಿಲುಗಡೆಗೆ ಕ್ರಮ ಕೈಗೊಳ್ಳಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಬಸ್ ನಿಲುಗಡೆ ಮಾಡದೆ ವಿದ್ಯಾರ್ಥಿಗಳೊಂದಿಗೆ ಉಡಾಫೆಯಾಗಿ ವರ್ತಿಸುವ ಬಸ್‌ಗಳ ನಂಬರ್ ತಂದು ನನಗೆ ದೂರು ನೀಡಿದರೆ ಅಂತವರ ವಿರುದ್ಧ ಸೂಕ್ತ ಕ್ರಮಕ್ಕೆ ಮುಂದಾಗುವುದಾಗಿ ಶಾಸಕರು ತಿಳಿಸಿದರು.