ಕಲಬುರಗಿ: ಕರೊನಾ ಅಟ್ಟಹಾಸದಿಂದಾಗಿ ಎಂಟು ತಿಂಗಳಿಂದ ಬಂದ್ ಆಗಿದ್ದ ಶಾಲಾ-ಕಾಲೇಜುಗಳ ಪೈಕಿ ಮಂಗಳವಾರದಿಂದ ಪದವಿ ಕಾಲೇಜುಗಳು ಪುನರಾರಂಭಗೊಂಡಿವೆ. ಪ್ರಥಮ ಹಂತದಲ್ಲಿ ಪದವಿ ಅಂತಿಮ ವರ್ಷದ ತರಗತಿ ಆರಂಭಿಸಲಾಗಿದ್ದು, ಕ್ಯಾಂಪಸ್ ಪ್ರವೇಶಿಸಲು ಕರೊನಾ ನೆಗೆಟಿವ್ ವರದಿ ಕಡ್ಡಾಯ ಮಾಡಿದ್ದರಿಂದ ಮೊದಲ ದಿನ ನಗರ ಸೇರಿ ಜಿಲ್ಲಾದ್ಯಂತ ಬೆರಳೆಣಿಕೆಯಷ್ಟು ವಿದ್ಯಾರ್ಥಿ ಗಳು ಕಾಣಿಸಿಕೊಂಡರು.
ಕೋವಿಡ್-19 ಕಾರಣದಿಂದಾಗಿ ಪದವಿ ಕಾಲೇಜುಗಳಲ್ಲಿ ಸುರಕ್ಷತಾ ಕ್ರಮಗಳನ್ನು ಅನುಸರಿಸಲಾಗಿದೆ. ಆದರೆ ವಿದ್ಯಾರ್ಥಿಗಳಿಗೆ ಕೋವಿಡ್ ವರದಿ ಕಡ್ಡಾಯ ಮಾಡಿದ್ದರಿಂದ ಬೋಧಕ-ಬೋಧಕೇತರ ಸಿಬ್ಬಂದಿ ಹೊರತುಪಡಿಸಿ ಕ್ಯಾಂಪಸ್ಗಳು ಭಣಗುಡುತ್ತಿದ್ದವು.
ಕೆಲವರು ಕಾಲೇಜಿಗೆ ಬಂದರೂ ಕರೊನಾ ನೆಗೆಟಿವ್ ವರದಿ ತಂದಿರದ ಕಾರಣ ಕ್ಯಾಂಪಸ್ ಪ್ರವೇಶಿಸಲು ಅನುಮತಿ ಸಿಗದೆ ವಾಪಸ್ ಹೋದರು. ಕೋವಿಡ್ ಟೆಸ್ಟ್ ಕಡ್ಡಾಯ ವಿದ್ಯಾರ್ಥಿ -ಪಾಲಕರಲ್ಲಿ ಗೊಂದಲ ಸೃಷ್ಟಿಸಿದೆ. ರಜೆ ಮತ್ತಿತರ ಕಾರಣಗಳಿಂದಾಗಿ ವಿದ್ಯಾರ್ಥಿಗಳಿಗೆ ಕರೊನಾ ಪರೀಕ್ಷಾ ವರದಿ ತರಲು ಸಾಧ್ಯವಾಗಿಲ್ಲ. ಮತ್ತೊಂದೆಡೆ ಗ್ರಾಮೀಣ ಭಾಗದಿಂದ ಬರುವ ವಿದ್ಯಾರ್ಥಿಗಳಿಗೆ ರಿಯಾಯಿತಿ ಬಸ್ ಪಾಸ್ ದೊರೆತಿಲ್ಲ. ಹೀಗೆ ವಿವಿಧ ಕಾರಣಗಳಿಂದ ವಿದ್ಯಾರ್ಥಿಗಳು ಕಾಲೇಜುಗಳಿಗೆ ಬರದಂತಾಗಿದೆ.
ಟೆಸ್ಟ್ಗೆ ಸಲಹೆ ನೀಡಿ ವಾಪಸ್ ಕಳುಹಿಸಿದ ಶಿಕ್ಷಕರು
ಆರಂಭದ ದಿನ ಕಾಲೇಜಿಗೆ ಆಗಮಿಸಿದ ವಿದ್ಯಾಥರ್ಿಗಳು ಕೋವಿಡ್ ಟೆಸ್ಟ್ ರಿಪೋರ್ಟ್ ತಂದಿರಲಿಲ್ಲ. ಹೀಗಾಗಿ ಪ್ರಾಚಾರ್ಯರು ಈ ಮಕ್ಕಳಿಗೆ ಸಲಹೆ ನೀಡಿ, ನೆಗೆಟಿವ್ ವರದಿ ತಂದರೆ ಮಾತ್ರ ಪ್ರವೇಶ ನೀಡುವಂತೆ ಸಕರ್ಾರ ಆದೇಶಿಸಿದೆ. ಪ್ರಮಾಣಪತ್ರ ವಿಳಂಬವಾದರೂ ಅಷ್ಟು ದಿನ ಅಟೆಂಡೆನ್ಸ್ ನೀಡಲಾಗುವುದು. ಜತೆಗೆ ಟೆಸ್ಟ್ ಮಾಡಿಸುವುದು ಕಡ್ಡಾಯ ಎಂದು ತಿಳಿಹೇಳಿ ಜಿಮ್ಸ್ ಆಸ್ಪತ್ರೆಗೆ ತೆರಳಿ ಆರ್ಟಿಪಿಸಿಆರ್ ಪರೀಕ್ಷೆ ಮಾಡಿಸಿಕೊಳ್ಳಲು ಸೂಚಿಸಿ ಕಳುಹಿಸಿಕೊಡಲಾಯಿತು ಎಂದು ವಿಜಿ ಮಹಿಳಾ ಕಾಲೇಜಿನ ಪ್ರಾಚಾರ್ಯ ಆರ್.ಸಿ. ಕೊಂಡಾ ತಿಳಿಸಿದರು.
ವಿಜಿ ಕಾಲೇಜಿನಲ್ಲಿ 4000 ವಿದ್ಯಾರ್ಥಿನಿಯರಿದ್ದು, ಮೊದಲ ದಿನ ಕೆಲವೇ ಕೆಲವರು ಕರೊನಾ ಟೆಸ್ಟ್ ವರದಿಯೊಂದಿಗೆ ಬಂದಿದ್ದರು. ಉಳಿದವರಿಗೆ ಪರೀಕ್ಷಿಸಿಕೊಳ್ಳಲು ಸಲಹೆ ನೀಡಿ ಕಳುಹಿಸಲಾಗಿದೆ. ಮೊದಲ ಮತ್ತು ಮೂರನೇ ಸೆಮಿಸ್ಟರ್ನವರಿಗೆ ಯಥಾವತ್ ಆನ್ಲೈನ್ ತರಗತಿ ನಡೆದಿವೆ. ಈಗ ಪದವಿ ಅಂತಿಮ ವರ್ಷದವರಿಗೆ ಮಾತ್ರ ಆಫ್ಲೈನ್ ತರಗತಿ ನಡೆಸಲಾಗುತ್ತಿದ್ದು, ಬರುವವರು ಪಾಲಕರ ಒಪ್ಪಿಗೆ ಪತ್ರ ತರುವುದು ಕಡ್ಡಾಯ. ಆಫ್ಲೈನ್ ಮತ್ತು ಆನ್ಲೈನ್ ಆಯ್ಕೆ ನೀಡಲಾಗುತ್ತಿದೆ ಎಂದರು. ಜಿಮ್ಸ್ನಲ್ಲಿ ಪರೀಕ್ಷೆ ವ್ಯವಸ್ಥೆ ಮಾಡಲಾಗಿದೆ ಎಂದು ಶರಣಬಸವ ವಿಶ್ವವಿದ್ಯಾಲಯ ಮೌಲ್ಯಮಾಪನ ಕುಲಸಚಿವ ಲಿಂಗರಾಜ ಶಾಸ್ತ್ರಿ ತಿಳಿಸಿದರು.
ನೂತನ ವಿದ್ಯಾಲಯ ಪದವಿ ಮಹಾವಿದ್ಯಾಲಯದಲ್ಲಿ 750 ಪದವಿ ವಿದ್ಯಾಥರ್ಿಗಳಿದ್ದು, ಈ ಪೈಕಿ ಕೇವಲ 60 ವಿದ್ಯಾಥರ್ಿಗಳು ಮೊದಲ ದಿನದ ತರಗತಿಗೆ ಹಾಜರಾಗಿದ್ದರು. ಶಿವಾ ಪದವಿ ಕಾಲೇಜು, ಕೋಹಿನೂರ, ಜಾಜಿ, ಎಂಎಸ್ಐ ಸೇರಿ ಬಹುತೇಕ ಪದವಿ ಮಹಾವಿದ್ಯಾಲಯಗಳಲ್ಲಿ ಇದೇ ಪರಿಸ್ಥಿತಿ ಕಂಡುಬಂತು.
ಶಿಕ್ಷಣ ಇಲಾಖೆಗೇಕೆ ವರದಿ ಕಡ್ಡಾಯ?
ಯಾವುದೇ ಇಲಾಖೆ ಸಿಬ್ಬಂದಿಗೂ ಕಡ್ಡಾಯಗೊಳಿಸದ ಕೋವಿಡ್ ವರದಿ ಶಿಕ್ಷಣ ಇಲಾಖೆಗೆ ಮಾತ್ರ ಮಾಡಿದ್ದೇಕೆ ಎಂದೇ ಪ್ರಶ್ನಿಸಲಾಗುತ್ತಿದೆ. ಪಾಲಕರು ಸಹ ವಿರೋಧ ವ್ಯಕ್ತಪಡಿಸಿದ್ದಾರೆ. ನಮ್ಮಲ್ಲಿ ಇರೋದು ಎರಡು ಕೋಣೆ ಮಾತ್ರ. ಟೆಸ್ಟ್ ನಂತರ ಹಾಗೊಂದು ವೇಳೆ ನಮ್ಮ ಮಗನಿಗೆ ಪಾಸಿಟಿವ್ ಬಂದರೆ ಆತ ಇರೋದು ಎಲ್ಲಿ? ಪ್ರತ್ಯೇಕ ಕೋಣೆ ವ್ಯವಸ್ಥೆ ಮಾಡಲು ನಮ್ಮ ಸಾಧ್ಯವಿಲ್ಲ. ಉಳ್ಳವರು ಏನಾದರೂ ಮಾಡಿಯಾರು. ಬಡವರ ಗತಿ ಏನು ಎಂದು ಪ್ರಶ್ನಿಸುತ್ತಿದ್ದಾರೆ.
ಕೋವಿಡ್ ಮಾರ್ಗಸೂಚಿಯಂತೆ ಪದವಿ ಅಂತಿಮ ವರ್ಷದ ತರಗತಿಗಳು ಆರಂಭಗೊಂಡಿವೆ. ಮೊದಲ ದಿನ ಕಡಿಮೆ ವಿದ್ಯಾಥರ್ಿಗಳು ಬಂದಿದ್ದಾರೆ. ಕ್ರಮೇಣ ಹೆಚ್ಚಲಿದೆ. ಎಲ್ಲರಿಗೂ ಕರೊನಾ ಟೆಸ್ಟ್ ಕಡ್ಡಾಯಗೊಳಿಸಲಾಗಿದೆ. ಎಸ್ಒಪಿ ಪಾಲಿಸಲು ಸೂಚಿಸಲಾಗಿದೆ. ಪಾಲನೆ ಮಾಡುತ್ತಿರುವುದನ್ನು ಖುದ್ದು ಪರಿಶೀಲಿಸುತ್ತಿದ್ದೇವೆ. ವಿದ್ಯಾಥರ್ಿಗಳ ಸುರಕ್ಷತೆಗೆ ಆದ್ಯತೆ ನೀಡಲು ಪ್ರಾಚಾರ್ಯರಿಗೆ ತಾಕೀತು ಮಾಡಲಾಗಿದೆ.
| ಶ್ರೀಶಕುಮಾರ
ಜಂಟಿ ನಿದರ್ೇಶಕ, ಕಾಲೇಜು ಶಿಕ್ಷಣ ಇಲಾಖೆ