ನೇಸರಗಿ: ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಉನ್ನತ ಗುರಿ ಮುಟ್ಟಬೇಕಾದರೆ ಹೆಚ್ಚು ಕ್ರಿಯಾಶೀಲರಾಗಿ ಸಕಾರಾತ್ಮಕ ಚಿಂತನೆ ಅಳವಡಿಸಿಕೊಳ್ಳಬೇಕು ಎಂದು ಶಾಸಕ ಬಾಬಾಸಾಹೇಬ ಪಾಟೀಲ ಹೇಳಿದರು.
ಸ್ಥಳಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ 2024&25ನೇ ಸಾಲಿನ ಕಾಲೇಜು ಅಭಿವೃದ್ಧಿ ಸಮಿತಿ (ಸಿಡಿಸಿ)ಸ್ವಾಗತ ಸಮಾರಂಭ ಕಾರ್ಯಕ್ರಮಕ್ಕೆ ಶನಿವಾರ ಸಸಿಗೆ ನೀರೆರೆಯುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು. ತಂದೆ&ತಾಯಿ ಮಕ್ಕಳ ಸರ್ವಾಂಗೀಣ ವಿಕಾಸಕ್ಕಾಗಿ ಹಗಲಿರುಳು ಶ್ರಮಿಸುತ್ತಿರುತ್ತಾರೆ. ಉತ್ತಮ ಅಂಕ ಪಡೆದರೆ ಪಾಲಕರ ಶ್ರಮ ಸಾರ್ಥಕವಾಗುತ್ತದೆ ಎಂದರು. ಕಾಲೇಜಿಗೆ ಬೇಕಾಗಿರುವ ಮೂಲಸೌಕರ್ಯ ಒದಗಿಸಿಕೊಡಲಾಗುವುದು. ಕಾಲೇಜು ಅಭಿವೃದ್ಧಿ ಸಮಿತಿಯ ಸರ್ವ ಸದಸ್ಯರು ಕಾಲೇಜಿನ ಏಳಿಗೆಗೆ ಶ್ರಮಿಸಲಿದ್ದಾರೆ ಎಂದರು.
ನೇಸರಗಿ ಬ್ಲಾಕ್ ಕಾಂಗ್ರೆಸ್ ಅಧ್ಯ ನಿಂಗಪ್ಪ ಅರಕೇರಿ ಮಾತನಾಡಿ, ಸ್ಪರ್ಧಾತ್ಮಕ ಯುಗದಲ್ಲಿ ಪ್ರತಿ ವಿದ್ಯಾರ್ಥಿಯೂ ಗುಣಾತ್ಮಕ ಶಿಣ ಪಡೆದುಕೊಂಡರೆ ಪಾಲಕರು ಹಾಗೂ ಪ್ರಾಧ್ಯಾಪಕರ ಶ್ರಮ ಸಾರ್ಥಕ ಎಂದರು.
ಕಾಲೇಜಿನ ಪ್ರಾಚಾರ್ಯ ಡಾ.ಕೀರನಾಯ್ಕ ಗಡ್ಡಿಗೌಡರ ಮಾತನಾಡಿದರು. ಸಿಡಿಸಿ ಉಪಾಧ್ಯ ಎ.ಆರ್.ಮಾಳಣ್ಣವರ, ಯುವ ಮುಖಂಡ ಸಚಿನ ಪಾಟೀಲ, ಬಾಳಪ್ಪ ಮಾಳಗಿ, ಬಸವರಾಜ ಚಿಕ್ಕನಗೌಡರ, ಸುರೇಶ ಕಂಡ್ರಿ, ಸಿಡಿಸಿ ಸದಸ್ಯರಾದ ನಿಂಗಪ್ಪ ತಳವಾರ, ಯಮನಪ್ಪ ತಳವಾರ, ನಜೀರ್ ತಹಶೀಲ್ದಾರ್, ಚನಗೌಡ ಪಾಟೀಲ, ಸುರೇಶ ಲೆಂಕನಟ್ಟಿ, ವಿನಾಯಕ ಮಾಸ್ತಮರ್ಡಿ, ರಾಯನಗೌಡ ಪಾಟೀಲ, ಮಂಜು ಮದೆಣ್ಣವರ, ಪುಂಡಲೀಕ ಹಮ್ಮಣ್ಣವರ, ಉಷಾ ನಾವಲಗಟ್ಟಿ, ಸಿದ್ದವ್ವ ಚಿಗರಿ ಇದ್ದರು. ಡಾ.ಎನ್.ಟಿ. ರೇಣಕಿಗೌಡರ ನಿರೂಪಿಸಿದರು, ಸುರೇಖಾ ಶೆಟ್ಟಿ ವಂದಿಸಿದರು.