ಹುಬ್ಬಳ್ಳಿ: ಕರೊನಾ ಸೋಂಕು ಹರಡುವಿಕೆ ತಡೆಗಟ್ಟುವ ಹೋರಾಟದ ಈ ಸಂದರ್ಭದಲ್ಲಿ ಬಡವರಿಗೆ ಸಹಾಯ ಮಾಡಲು ಭಾರತ ಸರ್ಕಾರ ಪ್ರಧಾನಮಂತ್ರಿ ಗರಿಬ್ ಕಲ್ಯಾಣ್ ಯೋಜನೆ (ಪಿಎಂಜಿಕೆವೈ) ಅಡಿ 1.70 ಲಕ್ಷ ಕೋಟಿ ರೂ. ಪರಿಹಾರ ಪ್ಯಾಕೇಜ್ ಘೋಷಿಸಿದ್ದು, ಕಡಿಮೆ ಸಂಬಳದ ಕಾರ್ವಿುಕರಿಗೆ ಇಪಿಎಫ್ ನೀಡಲು ಯೋಜಿಸಲಾಗಿದೆ.
ಗರಿಷ್ಠ ಒಂದು ನೂರು ಉದೊ್ಯೕಗಿಗಳನ್ನು ಹೊಂದಿರುವ ಸಂಸ್ಥೆಗಳ ಕೆಲಸಗಾರರು ಮುಂದಿನ ಮೂರು ತಿಂಗಳು, ಪ್ರತಿ ತಿಂಗಳಿಗೆ 15ಸಾವಿರಕ್ಕಿಂತ ಕಡಿಮೆ ವೇತನ ಪಡೆಯುವವರಿಗೆ 24 ಪ್ರತಿಶತಃವನ್ನು ಸಂಬಂಧಿಸಿದ ಉದೊ್ಯೕಗಿಗಳ ಇಪಿಎಫ್ ಖಾತೆಗಳಿಗೆ ನೇರವಾಗಿ ಪಾವತಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ಕನಿಷ್ಠ ಪ್ರತಿಶತಃ 90ರಷ್ಟು ಜನ 15000 ಕ್ಕಿಂತ ಕಡಿಮೆ ಮಾಸಿಕ ವೇತನ ಗಳಿಸುವವರಿರುವ ಸಂಸ್ಥೆಯ ಉದೊ್ಯೕಗಿಗಳಿಗೆ ಇದರ ಲಾಭ ದೊರೆಯಲಿದೆ.
ಹುಬ್ಬಳ್ಳಿಯ ಕಾರ್ವಿುಕರ ಭವಿಷ್ಯ ನಿಧಿ ಸಂಘಟಣೆ ಪ್ರಾದೇಶಿಕ ಕಚೇರಿ ವ್ಯಾಪ್ತಿಯಲ್ಲಿ ಮಾರ್ಚ್ 2020ರಲ್ಲಿ ಈ ಪ್ರಯೋಜನ ಪಡೆಯಬಹುದಾದ 3778 ಅರ್ಹ ಸಂಸ್ಥೆಗಳು ಇದ್ದು, ಅದರಲ್ಲಿ ಕೇವಲ 836 ಸಂಸ್ಥೆಗಳು ಈವರೆಗೆ ಆನ್ಲೈನ್ನಲ್ಲಿ ಇಸಿಆರ್ (ಎಲೆಕ್ಟ್ರಾನಿಕ್ ಚಲನ್ ಕಮ್ ರಿಟರ್ನ್) ಸಲ್ಲಿಸಿದ್ದು ಇದರಿಂದ ಪ್ರಯೋಜನ ಪಡೆದ ಒಟ್ಟು ಮೊತ್ತ 2,12,40,552 ರೂ.
ಇನ್ನೂ ಸುಮಾರು 2800 ಸಂಸ್ಥೆಗಳು ಇಸಿಆರ್ (ಎಲೆಕ್ಟ್ರಾನಿಕ್ ಚಲನ್ ಕಮ್ ರಿಟರ್ನ್) ಸಲ್ಲಿಸಬಹುದಾಗಿದ್ದು, ಅಂತಹ ಸಂಸ್ಥೆಗಳಿಗೆ ಈಗಾಗಲೇ ಇಮೇಲ್ ಮತ್ತು ಎಸ್ಎಂಎಸ್ ಮೂಲಕ ಇಸಿಆರ್ ಸಲ್ಲಿಸಲು ವಿನಂತಿಸಲಾಗಿದೆ.
ಹುಬ್ಬಳ್ಳಿ ಪ್ರಾದೇಶಿಕ ಕಛೇರಿ ವ್ಯಾಪ್ತಿಯ ಎಲ್ಲ ಅರ್ಹ ಸಂಸ್ಥೆಗಳ ಉದೊ್ಯೕಗದಾತರು ಮಾರ್ಚ್ 2020ರ ಇಸಿಆರ್ ಸಲ್ಲಿಸುವ ಮೂಲಕ ಯೋಜನೆಯ ಪ್ರಯೋಜನ ಪಡೆಯಬೇಕು. ಈ ಸಂಕಷ್ಟದ ಸಮಯದಲ್ಲಿ ಉದೊ್ಯೕಗಿಗಳ ಇಪಿಎಫ್ ಖಾತೆಗೆ ವೇತನದಿಂದ ಯಾವುದೇ ಕಡಿತವಿಲ್ಲದೆ ಹಣ ಜಮೆಯಾಗುವುದರಿಂದ ಅವರ ಮನೋಸ್ಥೈರ್ಯ ಹೆಚ್ಚಿಸುತ್ತದೆ ಮತ್ತು ಸಂಸ್ಥೆಗೂ ಹೊರೆ ಕಡಿಮೆಯಾಗುತ್ತದೆ ಎಂದು ಪ್ರಾದೇಶಿಕ ಭವಿಷ್ಯನಿಧಿ ಆಯುಕ್ತ ಮಿಹೀರ ಕುಮಾರ ತಿಳಿಸಿದ್ದಾರೆ.