ಹುಬ್ಬಳ್ಳಿ: ಇಲ್ಲಿಯ ಔದ್ಯಮಿಕ ನ್ಯಾಯಾಧೀಕರಣದ ಜಿಲ್ಲಾ ನ್ಯಾಯಾಧೀಶ ಹಾಗೂ ಪೀಠಾಸಿನಾಧಿಕಾರಿಗಳೂ ಆದ ವಿ. ಜಗದೀಶ ಅವರು ಬಳ್ಳಾರಿ ಜಿಲ್ಲೆ ಸಂಬಂಧಿಸಿದ ಕಾರ್ವಿುಕ ವಿವಾದಗಳ ವಿಚಾರಣೆಯನ್ನು ಮಾ. 6ರಂದು ಬೆಳಗ್ಗೆ 11ಗಂಟೆಗೆ ಬಳ್ಳಾರಿಯ ಪ್ರವಾಸಿ ಮಂದಿರದಲ್ಲಿ ನಡೆಸುವರು ಎಂದು ಪ್ರಕಟಣೆ ತಿಳಿಸಿದೆ.