ಚಾಮರಾಜನಗರ: ವಿದ್ಯಾರ್ಥಿಯ ಭವಿಷ್ಯವನ್ನು ರೂಪಿಸುವ, ಅವರ ಪ್ರತಿಭೆಯನ್ನು ಪ್ರೋತ್ಸಾಹಿಸುವ ಜವಾಬ್ದಾರಿ ಉಪನ್ಯಾಸಕರ ಮೇಲಿದೆ ಎಂದು ಪದವಿಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಸಿ.ಮಂಜುನಾಥ್ ಪ್ರಸನ್ನ ಹೇಳಿದರು.
ನಗರದ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆ, ಜಿಲ್ಲಾ ಪದವಿಪೂರ್ವ ಕಾಲೇಜು ಗಳ ಭೌತಶಾಸ್ತ್ರ ಉಪನ್ಯಾಸಕರ ಸಂಘದ ವತಿಯಿಂದ ನಡೆದ ಭೌತಶಾಸ್ತ್ರ ಕಾರ್ಯಾಗಾರದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅನೇಕ ವರ್ಷಗಳ ಪರಿಶ್ರಮದ ಮೂಲಕ ಶ್ರೇಷ್ಠ ಎನಿಸಿಕೊಳ್ಳಬಹುದು. ಆದರೆ ಆ ಶ್ರೇಷ್ಠತೆಯ ಹಾದಿಯಲ್ಲಿ ಮನ್ನಡೆಯಲು ಆ ಬಗೆಗೆ ನಮ್ಮನ್ನು ನಾವು ಜಾಗೃತ ವಸ್ಥೆಯಲ್ಲಿಟ್ಟುಕೊಳ್ಳಲು ತರಬೇತಿ ಕಾರ್ಯಾಗಾರಗಳು ಸಹಾಯ ಮಾಡುತ್ತವೆ. ಬೋಧಿಸಿದ ವಿಚಾರಗಳು ವಿದ್ಯಾರ್ಥಿಗಳ ದೈನಂದಿನ ಬದುಕಿನಲ್ಲಿ ಉಪಯೋಗವಾಗುವಂತಾಗಬೇಕು. ಈ ಮೂಲಕ ಶಿಕ್ಷಣವು ಬದುಕಿನ ಮೂಲಭೂತ ಪ್ರಶ್ನೆಗಳ ಅನ್ವೇಷಣೆಯ ತಾಣವಾಗಬೇಕು. ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯಲ್ಲಿ ಉಪನ್ಯಾಸ ಕರ ಪಾತ್ರ ಮಹತ್ವಪೂರ್ಣವಾದದ್ದು ಎಂದರು.
ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಯಶಸ್ವಿಯಾಗಿ ಎದುರಿಸಲು ಅಧ್ಯಾಪಕರು ವಿದ್ಯಾರ್ಥಿಗಳನ್ನು ಉತ್ತಮ ರೀತಿಯಲ್ಲಿ ತಯಾರುಗೊಳಿಸಬೇಕು. ವಿದ್ಯಾರ್ಥಿಗಳು ಬದುಕಿನಲ್ಲಿ ಸೋತಾಗ ಸಮಸ್ಯೆಯನ್ನು ಎದುರಿಸುವ ಶಕ್ತಿಯನ್ನು ತುಂಬಬೇಕು. ಅಲ್ಲದೆ ದೈನಂದಿನ ಚಟುವಟಿಕೆಗಳು ಪಾಠಪ್ರವಚನಗಳಲ್ಲಿ ಉದಾಹರಣೆಯಾಗಿ ಬಳಕೆಯಾದರೆ ವಿದ್ಯಾರ್ಥಿಗಳಿಗೆ ವಿಜ್ಞಾನ ವಿಷಯವು ಸುಲಭವೆನಿಸುವುದು ಉಪನ್ಯಾಸಕರು ಜಿಲ್ಲೆಗೆ ಉತ್ತಮ ಫಲಿತಾಂಶ ತರುವ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಇಲಾಖೆಯ ವತಿಯಿಂದ ಎಲ್ಲ ರೀತಿಯಲ್ಲೂ ನೆರವು ನೀಡಲಾಗುತ್ತದೆ ಎಂದರು.
ಜಿ.ಪಂ. ಡಿಆರ್ ಡಿಎ ಯೋಜನಾ ನಿರ್ದೇಶಕ ಕಿರಣ್ ಪಡ್ನೇಕರ್ ಕಾರ್ಯಕ್ರಮ ಉದ್ಘಾಟಿಸಿ ದರು. ಕಾರ್ಯಕ್ರಮದಲ್ಲಿ ತಾಂಡವಪುರ ಎಂಐಟಿ ಇಂಜಿನಿಯರಿಂಗ್ ಕಾಲೇಜು ಪ್ರಾಂಶುಪಾಲ ವೈ.ಕೆ.ಕೃಷ್ಷೇಗೌಡ, ಸರ್ಕಾರಿ ಪದವಿಪೂರ್ವ ಬಾಲಕರ ಕಾಲೇಜು ಪ್ರಾಂಶುಪಾಲ ಎಂ.ಸೋಮಣ್ಣ, ಜಿಲ್ಲಾ ಭೌತಶಾಸ್ತ್ರ ವೇದಿಕೆ ಯ ಅಧ್ಯಕ್ಷ ಮಧು ಟಿ. ಕಾರ್ಯದರ್ಶಿ ಷಡಕ್ಷರಸ್ವಾಮಿ, ಉಪನ್ಯಾಸಕರಾದ ಗೋವಿಂದ ಪ್ರಾರ್ಥಿಸಿದರು, ರೇಖಾ ನಿರೂಪಿಸಿದರು. ಸೌಗಂಥಿನಿ ಸ್ವಾಗತಿಸಿದರು. ಪ್ರಜ್ವಲ್ ವಂದಿಸಿದರು.