ಜಿಲ್ಲೆ

ಕಾರ್ಯಕರ್ತರು, ಮತದಾರರ ಖರೀದಿ ಸಾಧ್ಯವಿಲ್ಲ : ಸಿಪಿವೈಗೆ ಎಚ್‌ಡಿಕೆ ಟಾಂಗ್

ಚನ್ನಪಟ್ಟಣ: ಈ ಹಿಂದೆ ದುಡ್ಡು ಕೊಟ್ಟು ಎಂಎಲ್‌ಎಗಳನ್ನು ಕೊಂಡುಕೊಂಡಿದ್ದರು. ಈಗ ಕ್ಷೇತ್ರದ ಜೆಡಿಎಸ್ ಮುಖಂಡರನ್ನು ಕೊಂಡುಕೊಳ್ಳೋಕೆ ಮುಂದಾಗಿದ್ದಾರೆ. ಅವರು ಲೀಡರ್‌ಗಳನ್ನು ಖರೀದಿಸಬಹುದು. ಆದರೆ, ಕಾರ್ಯಕರ್ತರು ಹಾಗೂ ಮತದಾರರನ್ನು ಖರೀದಿಸಲು ಸಾಧ್ಯವೇ ಇಲ್ಲ ಎಂದು ಎಂಎಲ್‌ಸಿ ಸಿ.ಪಿ.ಯೋಗೇಶ್ವರ್‌ಗೆ ವಾಜಿ ಸಿಎಂ ಎಚ್.ಡಿ.ಕುವಾರಸ್ವಾಮಿ ಟಾಂಗ್ ನೀಡಿದರು.

ನಗರದ ಎಪಿಎಂಸಿ ಆವರಣದಲ್ಲಿ ಪಕ್ಷಾಂತರ ಪರ್ವದ ಬಗ್ಗೆ ಶುಕ್ರವಾರ ಸುದ್ದಿಗಾರರೊಂದಿಗೆ ವಾತನಾಡಿದ ಅವರು, ಚನ್ನಪಟ್ಟಣದಲ್ಲಿ ಬಿಜೆಪಿ ನಾಯಕರ ಕಣ್ಣೊರೆಸುವ ತಂತ್ರ ಲಿಸುವುದಿಲ್ಲ. ಜನರು ಮರಳಾಗಲ್ಲ. ಜಿಲ್ಲೆಗೆ ನಮ್ಮ ಕುಟುಂಬದ ಕೊಡುಗೆ ದೊಡ್ಡದಿದೆ. ನಮ್ಮ ಪಕ್ಷದ ಕೆಲ ಲೀಡರ್‌ಗಳು ಸಾಲ ವಾಡಿಕೊಂಡಿದ್ದರಂತೆ. ಅವರಿಗೆ ದುಡ್ಡು ಕೊಟ್ಟು ಬಿಜೆಪಿಗೆ ಸೇರ್ಪಡೆ ವಾಡಿಕೊಳ್ಳುತ್ತಿದ್ದಾರೆ. ಖರೀದಿಯಾಗುವ ನಾಯಕರ ಬಗ್ಗೆ ಜನ ತೀರ್ವಾನಿಸುತ್ತಾರೆ. ಪಕ್ಷಾಂತರ ಕೇವಲ ಚನ್ನಪಟ್ಟಣದಲ್ಲಿ ಅಲ್ಲ, ಇಡೀ ರಾಜ್ಯದಲ್ಲಿ ನಡೆಯುತ್ತಿದೆ. ನಾನು ಯಾವುದಕ್ಕೂ ಎದೆ ಗುಂದುವುದಿಲ್ಲ ಎಂದರು.

ನಾನು ಶಾಸಕನಾಗಿರುವ ಈ 3 ವರ್ಷದಲ್ಲಿ ಲೀಡರ್‌ಗಳು ಎಷ್ಟು ಕೆಲಸ ವಾಡಿಸಿಕೊಂಡಿದ್ದಾರೆ ಎಂಬ ಪಟ್ಟಿ ಕೊಡುತ್ತೇನೆ. ರಾಮನಗರ ಹಾಗೂ ಚನ್ನಪಟ್ಟಣ ಜನತೆ ನನ್ನನ್ನು ಹೃದಯದಲ್ಲಿ ಇಟ್ಟುಕೊಂಡಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ಕುವಾರ್ ಕಟೀಲ್, ನಾಯಕರಾದ ಅಮಿತ್ ಷಾ, ಜೆಪಿ ನಡ್ಡಾ ಬಂದು ನಮ್ಮ ಪಕ್ಷದ ಲೀಡರ್‌ಗಳನ್ನು ಪಕ್ಷಕ್ಕೆ ಸೇರಿಸಿಕೊಳ್ಳಲಿ ಚಿಂತೆಯಿಲ್ಲ. ಮತದಾರರು ನನ್ನೊಂದಿಗಿದ್ದಾರೆ. ಮುಂದಿನ ದಿನಗಳಲ್ಲಿ ಅವರೇ ಉತ್ತರ ಕೊಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸದನದ ಸಮಯ ಹಾಳಾಗುತ್ತಿದೆ: ಸದನದಲ್ಲಿ ಕಾಂಗ್ರೆಸ್ ನಾಯಕರ ಧರಣಿ ಬಗ್ಗೆ ಪ್ರತಿಕ್ರಿಯಿಸಿದ ಎಚ್.ಡಿ.ಕುಮಾರಸ್ವಾಮಿ, ಯಾರೋ ಒಬ್ಬ ಮಂತ್ರಿಯ ರಾಜೀನಾಮೆಗೆ ಆಗ್ರಹಿಸಿ ಕಾಂಗ್ರೆಸ್‌ನವರು ಧರಣಿ ವಾಡುತ್ತಿದ್ದಾರೆ. ಸದನದ ಕಲಾಪ ಹಾಳುಮಾಡಿ ಧರಣಿ ವಾಡುತ್ತಿದ್ದಾರೆ. ಸದನದಲ್ಲಿ ಚರ್ಚೆಯಾಗಬೇಕಾದ ಹಲವು ವಿಷಯಗಳಿವೆ, ಒಂದು ಕಡೆ ಆನೆ ಕಾಟ ಮತ್ತೊಂದು ಕಡೆ ವಿದ್ಯುತ್ ಕೊರತೆ, ಮಂಡ್ಯದಲ್ಲಿ ಭತ್ತ ಖರೀದಿ ವಾಡಿ ದುಡ್ಡು ಕೊಟ್ಟಿಲ್ಲವಂತೆ. ಇವೆಲ್ಲಾ ವಿಷಯಗಳನ್ನು ಎಲ್ಲಿ ಚರ್ಚೆ ವಾಡೋದು ಎಂದು ಪ್ರಶ್ನಿಸಿದರು.

ಅಧಿಕಾರದ ಪಿತ್ತ ನೆತ್ತಿಗೇರಿದೆ: ದೇಶದಲ್ಲಿ ನಡೆಯುತ್ತಿರುವ ಟನೆಗಳನ್ನು ನೋಡುತ್ತಿದ್ದೇನೆ. ಈಶ್ವರಪ್ಪ ರಾಷ್ಟ್ರಧ್ವಜದ ವಿಷಯದಲ್ಲಿ ಯಾವ ಆ್ಯಂಗಲ್‌ನಲ್ಲಿ ಹೇಳಿದರು? ಮುಂದಿನ ದಿನಗಳಲ್ಲಿ ಈ ದೇಶವನ್ನು ಹಿಂದೂ ರಾಷ್ಟ್ರ ವಾಡ್ತೀವಿ ಅಂತಾರೆ. ಈಗಿನ ಪರಿಸ್ಥಿತಿಯಲ್ಲಿ ಅವರು ಸ್ವಲ್ಪ ಸ್ಪೀಡ್ ಆಗಿ ಇದ್ದಾರೆ. ಬಿಜೆಪಿಯ ಅಂಗ ಪಕ್ಷಗಳಿಗೆ ಜನರು ಮನ್ನಣೆ ನೀಡುತ್ತಿದ್ದಾರೆ. ಆ ಗುಂಗಿನಲ್ಲಿ ಕೇಸರಿ ಧ್ವಜ ಹಾರಿಸ್ತೀನಿ ಅಂತಾ ಹೇಳುತ್ತಿದ್ದಾರೆ. ಅದೆಲ್ಲಾ ನಡೆಯೋದಿಲ್ಲ. ರಾಷ್ಟ್ರಧ್ವಜದ ವಿಚಾರದಲ್ಲಿ ಬಿಜೆಪಿಯವರು ವಾತಿನಲ್ಲಿ ಹೇಳಬಹುದು ಅಷ್ಟೇ. ಅದು ಸುಲಭವಲ್ಲ ಎಂದು ಎಚ್‌ಡಿಕೆ ಅಭಿಪ್ರಾಯಪಟ್ಟರು.

ಜನರ ದುಡ್ಡು ಎಂಬುದನ್ನು ಅರಿಯಲಿ:

ನಮ್ಮದು ಪ್ರಜಾಪ್ರಭುತ್ವ ರಾಷ್ಟ್ರ. ಏನು ಬೇಕಾದರೂ ವಾಡುತ್ತೇವೆ ಎಂಬುದು ಬಿಜೆಪಿಯ ಉದ್ಧಟತನ. ನಮ್ಮ ರಾಷ್ಟ್ರಧ್ವಜವನ್ನು ಯಾರೂ ಮುಟ್ಟೋಕೆ ಆಗಲ್ಲ. ಸ್ವಾತಂತ್ರ್ತ್ಯ ಬಂದ ನಂತರ ನಮ್ಮ ಹಿರಿಯರು ಸ್ಟ್ರಾಂಗ್ ಫೌಂಡೇಶನ್ ಹಾಕಿದ್ದಾರೆ. ಯಾವ ಶಕ್ತಿಗಳು ಬಂದರೂ ನಮ್ಮ ಸಂವಿಧಾನ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಲುಗಾಡಿಸಲು ಸಾಧ್ಯವಿಲ್ಲ. ಪರಿಸ್ಥಿತಿ ಹೀಗಿರುವಾಗ ಕಾಂಗ್ರೆಸ್‌ನವರು ಧರಣಿ ವಾಡುತ್ತಿರುವುದು ಸರಿ ಇಲ್ಲ. ಈ ವಿಚಾರವಾಗಿ ಅವರು ಅಹೋರಾತ್ರಿ ಧರಣಿ ವಾಡುತ್ತಿದ್ದಾರೆ. ಪ್ರತಿದಿನ ಸದನ ನಡೆಸುವ ಖರ್ಚು ಜನರ ತೆರಿಗೆ ದುಡ್ಡು ಎನ್ನುವುದನ್ನು ಅರಿಯಬೇಕು ಎಂದು ಕಾಂಗ್ರೆಸ್ ವಿರುದ್ಧ ಎಚ್‌ಡಿಕೆ ವಾಗ್ದಾಳಿ ನಡೆಸಿದರು.

ಸಿದ್ದು ಜತೆ ಯಾವತ್ತೂ ಆತ್ಮೀಯತೆ ಇರಲಿಲ್ಲ: ಸದನದಲ್ಲಿ ಕಾಂಗ್ರೆಸ್ ನಾಯಕರ ವಾತುಕತೆ ವೇಳೆ ದೇವೇಗೌಡ ನನ್ನ ಬಂದು ನೋಡುತ್ತಿದ್ದ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಖಾರವಾಗಿ ಪ್ರತಿಕ್ರಿಯಿಸಿದ ಕುವಾರಸ್ವಾಮಿ, ದೇವೇಗೌಡರನ್ನು ಬೆಳೆಸಿದ್ದು ಸಿದ್ದರಾಮಯ್ಯ ಅವರೇ ಅಲ್ವ.., ಪಾಪ ಜನತಾದಳಕ್ಕೆ ಕುವಾರಸ್ವಾಮಿ ಕೊಡುಗೆ ಏನು ಅಂತಾರೆ. ಅಂದು ಜನತಾದಳ 58 ಸೀಟು ಗೆಲ್ಲಬೇಕಾದರೆ ನನ್ನ ಕೊಡುಗೆ ಅಪಾರವಾಗಿದೆ. ದೇವೇಗೌಡರು ಬಡ್ಡಿಗೆ ಸಾಲ ತಗೊಂಡು ಬಂದು ಎಲೆಕ್ಷನ್ ವಾಡಿದ್ದಾರೆ. ಸಿದ್ದರಾಮಯ್ಯ ಕೊಡುಗೆ ಏನಿತ್ತು ಎಂದು ಪ್ರಶ್ನಿಸಿದರು.

ಸಿದ್ದರಾಮಯ್ಯ ಅವರ ನಾಯಕತ್ವ ಸರಿ ಇದ್ದಿದ್ದರೆ, ಆವತ್ತು 50 ಶಾಸಕರು ಏಕೆ ನನ್ನ ನಾಯಕತ್ವಕ್ಕೆ ಒಪ್ಪಿದರು ಎಂದು ಪ್ರಶ್ನಿಸಿದ ಕುವಾರಸ್ವಾಮಿ, ರಾಜಕಾರಣದಲ್ಲಿ ಎಲ್ಲರದ್ದು, ಎಲ್ಲ ಕಾಲದಲ್ಲಿ ನಡೆಯೋದಿಲ್ಲ. ನಾನೂ ಅಷ್ಟೇ, ಒಂದು ಸಮಯ ಬಂದಾಗ ಹಿಂದಕ್ಕೆ ಸರಿಯಬೇಕಾಗುತ್ತದೆ. ರಾಜಕಾರಣದಲ್ಲಿ ಒಂದೊಂದು ಟೈಮ್‌ನಲ್ಲಿ ಒಬ್ಬೊಬ್ಬರದು ನಡೆಯುತ್ತದೆ ಎಂದು ಸೂಕ್ಷ್ಮವಾಗಿ ತಿರುಗೇಟು ನೀಡಿದರು. ಸಿದ್ದರಾಮಯ್ಯ ಹಾಗೂ ನನಗೂ ರಾಜಕಾರಣದಲ್ಲಿ ಯಾವುದೇ ಕನೆಕ್ಷನ್ ಇಲ್ಲ. ಅವರು ಜನತಾದಳದಲ್ಲಿ ಇದ್ದಾಗಲೂ ನಾನು ಅವರ ಜತೆ ಯಾವತ್ತೂ ಆತ್ಮೀಯವಾಗಿರಲಿಲ್ಲ. ಅವರ ನಡವಳಿಕೆಯನ್ನು ಹತ್ತಿರದಿಂದ ನೋಡಿದ್ದೇನೆ, ಅವರಿಂದ ನಾನು ಸರ್ಟಿಫಿಕೇಟ್ ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ ಎಂದು ಟಾಂಗ್ ನೀಡಿದರು.