ಕಾರ್ಯಕರ್ತರ, ವಿಶ್ವಾಸ, ಗಳಿಸಿ, ನೂತನ, ಪದಾಧಿಕಾರಿಗಳಿಗೆ, ಬಿಜೆಪಿ, ರಾಜ್ಯಾಧ್ಯಕ್ಷ, ಕಟೀಲ್, ಸಲಹೆ, ಬೆಳಗಾವಿ, Activists, Trust, Gain, New, Infantry, BJP, President, Kateel, Advice, Belgaum
ಬಿಜೆಪಿ ಚಿಹ್ನೆ: ಶಾಸಕ ಅಭಯ ಪಾಟೀಲ ಮಾತನಾಡಿ, ಮುಂಬರುವ ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಚಿಹ್ನೆ ಆಧಾರಿತ ಚುನಾವಣೆ ಎದುರಿಸಲಿದೆ. ಈ ಬಗ್ಗೆ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಮುಂದಿನ ಮೇಯರ್ ಕೂಡ ಬಿಜೆಪಿಯವರೇ ಆಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಈರಣ್ಣ ಕಡಾಡಿ, ನಗರ ಅಧ್ಯಕ್ಷ ಶಶಿಕಾಂತ ಪಾಟೀಲ,ಡಾ.ವಿಶ್ವನಾಥ ಪಾಟೀಲ, ರಾಜೇಂದ್ರ ಹರಕುಣಿ ಸೇರಿ ಬಿಜೆಪಿ ಮುಖಂಡರು, ಸಾವಿರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.
ಗಾಂಧಿ-ಗೌಡರ ಪರಿಪಾಟವಿಲ್ಲ: ಗ್ರಾಮೀಣ ಅಧ್ಯಕ್ಷ, ಮಾಜಿ ಶಾಸಕ ಸಂಜಯ ಪಾಟೀಲ ಮಾತನಾಡಿ, ಅಧಿಕಾರ ನೀಡುವಲ್ಲಿ ಗಾಂಧಿ ಕುಟುಂಬ ಮತ್ತು ಗೌಡರ ಪರಿವಾರದ ಪರಿಪಾಟ ಬಿಜೆಪಿಯಲ್ಲಿಲ್ಲ. ಕೆಲಸ ಮಾಡುವರಿಗೆ ಆದ್ಯತೆ ನೀಡಲಾಗುತ್ತಿದೆ. ಅಭಿವೃದ್ಧಿ ಮತ್ತು ರಾಷ್ಟ್ರೀಯತೆ ತತ್ತ್ವದಡಿ ಜಿಲ್ಲೆಯೆಲ್ಲೆಡೆ ನಿಷ್ಠೆಯಿಂದ ಪಕ್ಷ ಕಟ್ಟುವ ಕೆಲಸ ಮಾಡುತ್ತೇನೆ. ಅದಕ್ಕೆ ಎಲ್ಲರ ಸಹಕಾರ ಮತ್ತು ಮಾರ್ಗದರ್ಶನ ಅತ್ಯಗತ್ಯ ಎಂದರು.
ತಮಗೆ ನೀಡಿರುವ ಪಕ್ಷದ ಧ್ವಜವು ಜವಾಬ್ದಾರಿ ಹಾಗೂ ಅದರಲ್ಲಿನ ಕಮಲ ಭಾವನೆಯ ಸಂಕೇತ. ಬೆಳಗಾವಿಯ ಪ್ರತಿಯೊಬ್ಬ ಮತದಾರರ ಹೃದಯದಲ್ಲಿ ಕಮಲ ಅರಳಿಸಬೇಕು ಎಂದರು.
ನಗರದ ಮರಾಠಾ ಮಂಗಲ ಕಾರ್ಯಾಲಯದಲ್ಲಿ ಬುಧವಾರ ಆಯೋಜಿಸಿದ್ದ ಬೆಳಗಾವಿ ಜಿಲ್ಲಾ ಬಿಜೆಪಿಯ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಗ್ರಾಮೀಣ ಜಿಲ್ಲಾಧ್ಯಕ್ಷರಾಗಿ ಮಾಜಿ ಶಾಸಕ ಸಂಜಯ ಪಾಟೀಲ ಹಾಗೂ ನಗರ ಘಟಕದ ಅಧ್ಯಕ್ಷರಾಗಿ ಶಶಿಕಾಂತ ಪಾಟೀಲ ಅವರಿಗೆ ನಿಕಟಪೂರ್ವ ಅಧ್ಯಕ್ಷರಿಂದ ಧ್ವಜ ಹಸ್ತಾಂತರಿಸುವ ಮೂಲಕ ಅಧಿಕಾರ ವಹಿಸಿ ಮಾತನಾಡಿದರು.
ವಂಶಾಡಳಿತ ಮತ್ತು ಮತ ಬ್ಯಾಂಕ್ ರಾಜಕಾರಣದ ಅಬ್ಬರದಲ್ಲಿಯೂ ರಾಷ್ಟ್ರೀಯತೆ ನೆಲೆಗಟ್ಟಿನಿಂದ ಹೋರಾಟ ನಡೆಸಿ, ಪಕ್ಷಕ್ಕೊಂದು ಸ್ಥಾನಮಾನ ಕಲ್ಪಿಸಿಕೊಟ್ಟ ಈ ಹಿಂದಿನ ಪದಾಧಿಕಾರಿಗಳ ಮಾರ್ಗದರ್ಶನ ಪಡೆದು, ಎಲ್ಲ ಕಾರ್ಯಕರ್ತರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷ ಸಂಘಟಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಹೇಳಿದ್ದಾರೆ.
ವಿಜಯವಾಣಿ ಸುದ್ದಿಜಾಲ ಬೆಳಗಾವಿ
ರಾಜ್ಯಸಭಾ ಸದಸ್ಯ ಡಾ.ಪ್ರಭಾಕರ ಕೋರೆ ಮಾತನಾಡಿ, ರಾಜ್ಯ ರಾಜಕೀಯದ ಶಕ್ತಿಕೇಂದ್ರವಾಗಿ ಬೆಂಗಳೂರಿನ ನಂತರದ ಸ್ಥಾನದಲ್ಲಿ ಬೆಳಗಾವಿ ಅಲ್ಲ, ಬೆಳಗಾವಿಗೆ ಬೆಂಗಳೂರಿನಷ್ಟೇ ರಾಜಕೀಯ ಶಕ್ತಿ ಇದೆ. ಮುಂದಿನ ಚುನಾವಣೆಯಲ್ಲಿ ಜಿಲ್ಲೆಯ 18 ವಿಧಾನಸಭಾ ಕ್ಷೇತ್ರಗಳಲ್ಲೂ ಬಿಜೆಪಿ ಅಭ್ಯರ್ಥಿಗಳನ್ನೇ ಆಯ್ಕೆ ಮಾಡಲಾಗುವುದು ಎಂದು ಹೇಳಿದರು. 2018ರ ಚುನಾವಣೆಯಲ್ಲಿ ಬಹುಮತ ಸಿಕ್ಕರೂ ಆಡಳತಕ್ಕೆ ಬಾರದ ಬಿಜೆಪಿ, ನಂತರ ಯಡಿಯೂರಪ್ಪ ನೇತೃತ್ವದ ಸರ್ಕಾರ ರಚನೆ ಮಾಡುವಲ್ಲಿ ಬೆಳಗಾವಿ ಜಿಲ್ಲೆಯ ಪಾತ್ರ ದೊಡ್ಡದು ಎಂಬುದು ಹೆಮ್ಮೆಯ ಸಂಗತಿ. ಬಿಎಸ್‌ವೈ ಬಲ, ಸಂಘಟನೆಯಲ್ಲಿ ಕಟೀಲ್ ಛಲ ಒಂದಾಗಿ ಅಭಿವೃದ್ಧಿ ಪರ್ವ ಆರಂಭವಾಗಿದೆ ಎಂದರು.
ಬೆಳಗಾವಿಗಿದೆ ಬೆಂಗಳೂರಿನಷ್ಟೇ ರಾಜಕೀಯ ಶಕ್ತಿ!
ಮಹಾಂತೇಶ ಕವಟಗಿಮಠ ವಿಧಾನ ಪರಿಷತ್ ಮುಖ್ಯ ಸಚೇತಕ
ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದಿದೆ. ಈ ಅವಕಾಶ ಬಳಸಿಕೊಂಡು ನದಿ ಜೋಡಣೆ ಸೇರಿ ಇನ್ನಿತರ ಅಭಿವೃದ್ಧಿ ಕಾರ್ಯ ಕೈಗೊಂಡು ಜಿಲ್ಲೆಯ ಜತೆಗೆ ರಾಜ್ಯದ ಸರ್ವತೋಮುಖ ಅಭಿವೃದ್ಧಿ ಸಾಧಿಸಬೇಕಿದೆ. ಮುಂದಿನ ಚುನಾವಣೆಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಲು ಶ್ರಮಿಸಲಾಗುವುದು.
ಬೆಳಗಾವಿ ದಕ್ಷಿಣ ಮತ್ತು ಉತ್ತರ ಕ್ಷೇತ್ರ ಎಂದು ಪ್ರತ್ಯೇಕವಾಗಿ ಪರಿಗಣಿಸದೆ ಪಕ್ಷದ ಹಿರಿಯರ ಮಾರ್ಗದರ್ಶನದಲ್ಲಿ ಹೊಸಬರನ್ನು ಹಾಗೂ ಸಕ್ರಿಯ ಕಾರ್ಯಕರ್ತರನ್ನು ಗಣನೆಗೆ ತೆಗೆದುಕೊಂಡು ಪಕ್ಷ ಸಂಘಟಿಸಲಾಗುವುದು.
ಅನಿಲ ಬೆನಕೆ ಶಾಸಕ