ರೇವತಗಾಂವ: ಕಾರ್ಮಿಕರನ್ನು ಆರ್ಥಿಕ ಹಾಗೂ ವೈದ್ಯಕೀಯ ಹಾಗೂ ಅವರ ಕುಟುಂಬಗಳಿಗೆ ನೆರವಾಗಲು ಕಾರ್ಮಿಕ ಆರೋಗ್ಯ ಭಾಗ್ಯ ಯೋಜನೆ ಸಹಕಾರಿಯಾಗಿದೆ ಎಂದು ಜಿಲ್ಲಾ ಎಸ್‌ಸಿ ಯುವ ಮೋರ್ಚಾ ಕಾರ್ಯದರ್ಶಿ ರವಿ ಕೆಂಗಾರ ಹೇಳಿದರು.
ಗ್ರಾಮದಲ್ಲಿ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಆರೋಗ್ಯ ಉಚಿತ ತಪಾಸಣೆ ಶಿಬಿರಕ್ಕೆ ಬುಧವಾರ ಚಾಲನೆ ನೀಡಿ ಅವರು ಮಾತನಾಡಿದರು.
ಕಾರ್ಮಿಕರು ಬಿಸಿಲು, ಮಳೆ, ಲೆಕ್ಕಿಸದೆ ದಿನವಿಡೀ ಕೆಲಸ ಮಾಡಬೇಕಾಗುತ್ತದೆ. ಆದರೆ, ಕಾರ್ಮಿಕರು ಅನಾರೋಗ್ಯಕ್ಕೆ ತುತ್ತಾದರೆ ಅವರು ದುಡಿದ ಹಣವೆಲ್ಲಾ ಚಿಕಿತ್ಸೆಗೆ ವೆಚ್ಚವಾಗುತ್ತದೆ. ಹೀಗಾಗಿ ಸರ್ಕಾರ ಕಾರ್ಮಿಕರ ಹಿತದೃಷ್ಟಿಯಿಂದ ಈ ಯೋಜನೆ ರೂಪಿಸಿದ್ದು, ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.
ಬಿಪಿ, ಸಕ್ಕರೆ ಕಾಯಿಲೆ, ರಕ್ತ ತಪಾಸಣೆ, ಹೃದ್ರೋಗ ತಪಾಸಣೆ, ಕಣ್ಣಿನ ತೊಂದರೆ, ಶ್ವಾಸಕೋಶದ ತಪಾಸಣೆ ಸೇರಿ ಹಲವಾರು ವಿಧದ ತಪಾಸಣೆ ನಡೆಸಲಾಯಿತು. ಆರೋಗ್ಯ ತಪಾಸಣೆ ಶಿಬಿರಾರ್ಥಿಗಳಾದ ಸುನೀಲ ರಾಠೋಡ, ಅನೀಲ ರಾಠೋಡ, ರವಿ ಕಂಕಣೆನವರ ಸೇರಿ ಗ್ರಾಪಂ ಅಧಿಕಾರಿಗಳು, ಸದಸ್ಯರು, ಸಿಬ್ಬಂದಿ ವರ್ಗ ಹಾಗೂ ಕಾರ್ಮಿಕರು ಉಪಸ್ಥಿತರಿದ್ದರು.