ಹುಮನಾಬಾದ್‌ನಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್ ಕಾರ್ಮಿಕರಿಗೆ ಕಟ್ಟಡ ಸಾಮಗ್ರಿ ಕಿಟ್ ವಿತರಿಸಿದರು. ತಾಪಂ ಇಒ ದೀಪಿಕಾ ನಾಯ್ಕರ್, ಅಧಿಕಾರಿ ಗಂಗಾಧರ, ಬಸವರಾಜ ಮಾಳಗೆ, ಸಂತೋಷ ಪಾಟೀಲ್, ಮಲ್ಲಿಕಾರ್ಜುನ ಸೀಗಿ ಇತರರಿದ್ದರು. 
ಜಿಲ್ಲೆ

ಕಾರ್ಮಿಕರು ಯೋಜನೆ ಸದ್ಬಳಕೆ ಮಾಡಿಕೊಳ್ಳಲಿ

ಹುಮನಾಬಾದ್: ಕಟ್ಟಡ ಕೂಲಿ ಕಾರ್ಮಿಕರು ಸರ್ಕಾರದ ಯೋಜನೆ ಸದುಪಯೋಗ ಪಡೆದು ಆರ್ಥಿಕವಾಗಿ ಸಬಲರಾಗಬೇಕೆಂದು ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್ ಹೇಳಿದರು.

ಪಟ್ಟಣದ ಶಾಸಕರ ಕಚೇರಿಯಲ್ಲಿ ಶುಕ್ರವಾರ ಕಾರ್ಮಿಕ ಇಲಾಖೆ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ೬೪ ಕೂಲಿ ಕಾರ್ಮಿಕರಿಗೆ ಕಟ್ಟಡ ಸಾಮಗ್ರಿಗಳ ಕಿಟ್ ವಿತರಿಸಿದ ಅವರು, ಕಟ್ಟಡ ಕಾರ್ಮಿಕರಿಗೆ ಅವರ ಕೆಲಸಕ್ಕೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಸರ್ಕಾರ ಕಿಟ್ ಒದಗಿಸುತ್ತಿದ್ದು, ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಕೋರಿದರು.

ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ದೀಪಿಕಾ ನಾಯ್ಕರ್, ಕಟ್ಟಡ ಕೂಲಿ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಮಾಳಗೆ, ತಾಲೂಕು ಅಧ್ಯಕ್ಷ ಗೌಸೊದ್ದೀನ್, ಉಪಾಧ್ಯಕ್ಷ ಈಶ್ವರ ಕ್ರಾಂತಿ, ಸಿಬ್ಬಂದಿ ಸುಭಾಷ, ಪ್ರಮುಖರಾದ ಸಂತೋಷ ಪಾಟೀಲ, ಅಭಿಮನ್ಯು ನಿರಗುಡಿ, ಗಿರೀಶ ತುಂಬಾ, ಮಲ್ಲಿಕಾರ್ಜುನ ಸೀಗಿ, ನಾಗಭೂಷಣ ಸಂಗಮ, ಗೋಪಾಲಕೃಷ್ಣ ಮೋಹಳೆ, ಮಾಣಿಕರೆಡ್ಡಿ, ವಿನಾಯಕ ಮಂಕೋಜಿ, ಗೌತಮ ಚವ್ಹಾಣ್ ಇತರರಿದ್ದರು.

ಇಲಾಖೆ ಅಧಿಕಾರಿ ಗಂಗಾಧರ ಪ್ರಾಸ್ತಾವಿಕ ಮಾತನಾಡಿದರು. ಪ್ಲಾಸ್ಟರ್ ಕಿಟ್ ೪೧, ಟೈಲ್ಸ್ ಕಿಟ್ 8, ವೆಲ್ಡಿಂಗ್ ಕಿಟ್ ೧೦ ಹಾಗೂ ಆರ್‌ಪಿಎಲ್ ತರಬೇತಿ ಕಿಟ್ ೫ ಸೇರಿ ೬೪ ಕಾರ್ಮಿಕರಿಗೆ ಕಿಟ್ ವಿತರಿಸಲಾಯಿತು.