ಬಾಗಲಕೋಟೆ: ಬಾಗಲಕೋಟೆ ತಾಲೂಕಿನ ಕಾರ್ಮಿಕರಿಗೆ ಇಲಾಖೆ ಕಚೇರಿಯಲ್ಲಿ ಸಿಬ್ಬಂದಿ ಕೊರತೆಯಿಂದ ಮೂರು ನಾಲ್ಕುವರ್ಷಗಳಿಂದ ಸರ್ಕಾರದ ಯಾವುದೇ ಸೌಲಭ್ಯಗಳು, ಕಾರ್ಮಿಕರಿಗೆ ಕಿಟ್‌ಗಳು ದೊರೆಯುತ್ತಿಲ್ಲ. ಇದರಿಂದ ಕಾರ್ಮಿಕರು ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ ಎಂದು ಬಾಗಲಕೋಟೆ ಜಿಲ್ಲಾ ಗೃಹ ನಿರ್ಮಾಣ ಮತ್ತು ಕಟ್ಟಡ ಕಾರ್ಮಿಕರ ಸಂಘದ ಮುಖಂಡ ಚಂದ್ರಶೇಖರ ಮಡಿವಾಳರ ಹೇಳಿದರು.
ಸರ್ಕಾರ ಕಾರ್ಮಿಕರಿಗೆ ಅನುಕೂಲವಾಗಲು ಅನೇಕ ಜನಪರ ಯೋಜನೆಗಳನ್ನು ತಂದಿದೆ. ಆದರೆ, ಇಲಾಖೆಯ ಅಕಾರಿಗಳ ಸಿಬ್ಬಂದಿಗಳ ಕೊರತೆಯಿಂದ ಆನ್ ಲೈನ ಸೇವೆಗಳು ಕಾರ್ಮಿಕರಿಗೆ ಸಿಗದೇ ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಕಾರ್ಮಿಕ ಕಾರ್ಡ್ ವಿದ್ಯಾರ್ಥಿ ವೇತನ, ಅರವತ್ತು ವರ್ಷ ಮೇಲ್ಪಟ್ಟವರಿಗೆ ಪಿಂಚಣಿ, ವಿದ್ಯಾರ್ಥಿಗಳಿಗೆ ಬಸ್ ಪಾಸ್, ಎಎಸ್ಐ ವೈದ್ಯಕೀಯ ಸೇವೆಗಳು ಅರ್ಹ ಕಾರ್ಮಿಕರಿಗೆ ಸಿಗುತ್ತಿಲ್ಲ. ಇದರ ಬಗ್ಗೆ ಮೇಲಾಕಾರಿಗಳಿಗೆ ಜಿಲ್ಲಾ ಗೃಹ ನಿರ್ಮಾಣ ಮತ್ತು ಕಟ್ಟಡ ಕಾರ್ಮಿಕರಿಗೆ ಸಂಘದವರು ತಿಳಿಸಿದರೇ ಸ್ಪಂದಿಸುತ್ತಿಲ್ಲ ಎಂದು ದೂರಿದರು.
ಕಟ್ಟಡ ಕಾರ್ಮಿಕರಿಗೆ ಸರ್ಕಾದಿಂದ ಸಿಗುವ ಸಾಲ ಸೌಲಭ್ಯಗಳು ಕಾರ್ಮಿಕರಿಗೆ ಇದುವರಿಗೂ ಕಾರ್ಮಿಕರಿಗೆ ಒದಗಿಸಿಲ್ಲ. ಅಲ್ಲದೇ ಅನಕ್ಷರಸ್ಥ ಕಾರ್ಮಿಗೆ ಕಾರ್ಮಿಕರಿಗೆ ಇಲಾಖೆಯವರು ಸರ್ಕಾರದಿಂದ ಕಾರ್ಮಿಕರಿಗೆ ಸಿಗುವ ಯೋಜನೆಗಳ ಬಗ್ಗೆ ಅರಿವು ಮೂಡಿಸುವ ಕಾರ್ಯ ಮಾಡದೇ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆರೋಪಿಸಿದರು.
ಕಾರ್ಮಿಕರು ಅಲ್ಲದವರು ಏಜೆಂಟರ್ ಮೂಲಕ ಕಾರ್ಮಿಕರಿಗೆ ಕಚೇರಿಯ ಸರ್ಕಾರಿ ಸೌಲಭ್ಯಗಳನ್ನು ಪಡೆದು ಕೊಳ್ಳುತ್ತಿದ್ದಾರೆ. ಬಾಗಲಕೋಟೆ ತಾಲೂಕಿನಲ್ಲಿ 30 ಸಾವಿರ ಕಾರ್ಮಿಕರಿದ್ದಾರೆ. ಕಾರ್ಮಿಕರ ಸಂಘಟನೆಯಿಂದ 715 ಕಾರ್ಮಿಕರ ಹೆಸರನ್ನು ಕಾರ್ಮಿಕರ ಕಚೇರಿಗೆ ನೀಡಲಾಗಿದೆ. ಅದರಲ್ಲಿ 87 ಕಾರ್ಮಿಕರಿಗೆ ಮಾತ್ರ ಕಿಟ್ ಗಳನ್ನು ಪೂರೈಸಲಾಗಿದೆ. ಇನ್ನುಳಿದವರಿಗೆ ಕೊಟ್ಟಿಲ್ಲ ಎಂದು ದೂರಿದ ಅವರು, ಜಿಲ್ಲೆಯಲ್ಲಿ ಕಾರ್ಮಿಕರಿಗೆ ಆರೋಗ್ಯ ಇಎಸ್ಐ ಆಸ್ಪತ್ರೆ ನಿರ್ಮಿಸ ಬೇಕು ಎಂದು ಆಗ್ರಹಿಸಿದರು.
ಜಿಲ್ಲಾ ಗೃಹ ನಿರ್ಮಾಣ ಮತ್ತು ಕಟ್ಟಡ ಕಾರ್ಮಿಕರ ಸಂಘದ ಪದಾಧಿಕಾರಿಗಳಾದ ವೆಂಕಪ್ಪ ದೊಡ್ಡಮನಿ, ಗಂಗಾಧರ, ದಾಸಪ್ಪ ಮತ್ತಿತರರು ಇದ್ದರು.