ಖಾನಾಪುರ: ಪಟ್ಟಣದಲ್ಲಿ ಕಾರ್ಮಿಕ ಇಲಾಖೆಯಿಂದ ನೀಡಲಾಗುವ ಕಿಟ್ಗಳನ್ನು ಶಾಸಕ ವಿಠ್ಠಲ ಹಲಗೇಕರ 434 ಕಾರ್ಮಿಕರಿಗೆ ಈಚೆಗೆ ವಿತರಿಸಿದರು. ಬಳಿಕ ಮಾತನಾಡಿದ ಅವರು, ಕ್ಷೇತ್ರದಲ್ಲಿ ಅಂದಾಜು 30,000ಕ್ಕೂ ಅಧಿಕ ಕಟ್ಟಡ ಹಾಗೂ ವಿವಿಧ ಕಾರ್ಮಿಕರು ನೋಂದಣಿ ಮಾಡಿಕೊಂಡಿದ್ದಾರೆ. ಅವರ ಕೆಲಸಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕಿಟ್ ವಿತರಿಸಲಾಗಿದೆ. ಅವುಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು. ತಾಪಂ ಇಒ ವಿಲಾಸ ರಾಜ್, ಕಾರ್ಮಿಕ ಇಲಾಖೆ ನಿರೀಕಿ ದೀಪಾ ಬಂಡಿ, ಡಿಒ ಮಂಜುನಾಥ ವಾಲ್ಮೀಕಿ, ಪ್ರ ಭಾಕರ ಪಾಟೀಲ, ಕೃಷಿ ಪತ್ತಿನ ಸಂದ ನಿರ್ದೇಶಕ ಶಂಕರ ಪಾಟೀಲ ಇತರರಿದ್ದರು.