ಚಿಂಚೋಳಿ: ಗಣಿಗಾರಿಕೆಗೆ ಪರವಾನಗಿ ಹಾಗೂ ಪರಿಸರ ಮಾಲಿನ್ಯ ಮಂಡಳಿಯಿAದ ಅನುಮೋದನೆ ನೀಡುವಂತೆ ಸಲ್ಲಿಸಿರುವ ಅರ್ಜಿಗಾಗಿ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಲಾಗಿದೆ. ಪರ ಮತ್ತು ವಿರೋಧ ವ್ಯಕ್ತವಾಗಿದ್ದು, ವರದಿ ಸಿದ್ಧಪಡಿಸಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಹೇಳಿದರು.
ಮಿರಿಯಾಣದ ವೀರಭದ್ರಶ್ವೇರ ದೇವಾಲಯದ ಆವರಣದಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿAದ ಗುರುವಾರ ಹಮ್ಮಿಕೊಂಡಿದ್ದ ಪರಿಸರ ಸಾರ್ವಜನಿಕ ಆಲಿಕೆ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಈ ಭಾಗದ ಕಾರ್ಮಿಕರ ಹಿತ ಕಾಪಾಡುವುದು ನಮ್ಮ ಕರ್ತವ್ಯವಾಗಿದೆ. ಸಮರ್ಪಕ ಸಮೀಕ್ಷೆ ನಡೆಸಿ ಕಾರ್ಮಿಕ ಕಾರ್ಡ್ ಹಾಗೂ ಅಗತ್ಯ ಸೌಲಭ್ಯಗಳು ಕಲ್ಪಿಸುವಂತೆ ಕಾರ್ಮಿಕ ಇಲಾಖೆಗೆ ಸೂಚನೆ ನೀಡುತ್ತೇನೆ ಎಂದು ತಿಳಿಸಿದರು.
ಗಣಿಗಾರಿಕೆಯಿಂದ ಹೊರಬಂದಿರುವ ಕಲ್ಲಿನ ಚೂರುಗಳು ತೆರವುಗೊಳಿಸಲು ಸಿಮೆಂಟ್ ಕಂಪನಿಗಳೊAದಿಗೆ ಚರ್ಚಿಸಲಾಗುವುದು. ಬಳಿಕ ತೆರವು ಕಾರ್ಯಚರಣೆ ನಡೆಯಲಿದೆ. ಅಕ್ರಮ ಗಣಿಗಾರಿಕೆಗೆ ಯಾವುದೇ ಕಾರಣಕ್ಕೂ ಅವಕಾಶ ಕಲ್ಪಿಸುವುದಿಲ್ಲ. ಸಾರ್ವಜನಿಕರ ಆಶಯದಂತೆ ಸರ್ಕಾರ ಕಾರ್ಯನಿರ್ವಹಿಸಲಿದೆ ಎಂದರು.
ಸೇಡA ಸಹಾಯಕ ಆಯುಕ್ತ ಪ್ರಭುರೆಡ್ಡಿ, ಪರಿಸರ ಮಾಲಿನ್ಯ ಹಿರಿಯ ಅಧಿಕಾರಿ ರೇಖಾ, ಪರಿಸರ ಮಾಲಿನ್ಯ ಮಂಡಳಿ ಜಿಲ್ಲಾ ಅಧಿಕಾರಿಗಳಾದ ಸೋಮಶೇಖರ ಸಣ್ಣಬಾಳ, ಶಾರದಾ, ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ, ಡಿವೈಎಸ್‌ಪಿ ಸಂಗಮನಾಥ ಹಿರೇಮಠ, ಪ್ರಮುಖರಾದ ಅಬ್ದುಲ್ ರವೂಫ್, ರವಿಶಂಕರರೆಡ್ಡಿ ಮುತ್ತಂಗಿ, ಮಾರುತಿ ಗಂಜಗೇರಾ, ಅಬ್ದುಲ್ ಬಾಸೀದ್, ಜಗನ್ನಾಥ ಇದಲಾಯಿ, ಸುದರ್ಶನರೆಡ್ಡಿ ರೋಡ್‌ಕಲ್ಲೂರ, ಗೋಪಾಲರಾವ ಕಟ್ಟಿಮನಿ, ಶಿವಾನಂದ ಮಾಲಿಪಾಟೀಲ್, ಜಾಫರ್‌ಖಾನ್ ಮಿರಿಯಾಣ, ಡಾ. ತುಕರಾಮ ಪವಾರ್ ಇತರರಿದ್ದರು.