ಜಮಖಂಡಿ ನಗರದ ರಮಾ ನಿವಾಸದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಐಎನ್‌ಟಿಯುಸಿ ನೂತನ ಜಿಲ್ಲಾಧ್ಯಕ್ಷ ತೌಫಿಕ್ ಪಾರ್ಥನಳ್ಳಿ ಮಾತನಾಡಿದರು. ಶ್ಯಾಮರಾವ ಘಾಟಗೆ, ಈಶ್ವರ ವಾಳೆನ್ನವರ, ಹಣಮಂತ ತೇಲಿ, ಅಬುಬಕರ ಕುಡಚಿ ಇತರರು ಇದ್ದರು.  
ಜಿಲ್ಲೆ

ಕಾರ್ಮಿಕರ ಸೇವೆಗೆ ಸದಾ ಸಿದ್ಧ

ಬಾಗಲಕೋಟೆ:  ಶ್ರಮಿಕರು, ಕೂಲಿಕಾರ್ಮಿಕರ ಸೇವೆಗೆ ಸದಾಸಿದ್ಧವಿರುವದಾಗಿ ಐಎನ್‌ಟಿಯುಸಿ ನೂತನ ಜಿಲ್ಲಾಧ್ಯಕ್ಷ ತೌಫಿಕ್ ಪಾರ್ಥನಳ್ಳಿ ಹೇಳಿದರು.

ಜಮಖಂಡಿ ನಗರದ ನಿರೀಕ್ಷಣಾ ಮಂದಿರ ರಮಾನಿವಾಸದಲ್ಲಿ ಹಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ, ಮಾಜಿ ಶಾಸಕ ಆನಂದ ನ್ಯಾಮಗೌಡರ ಅಪೇಕ್ಷೆಯಂತೆ ಭಾರತ ರಾಷ್ಟಿçÃಯ ಟ್ರೇಡ್ ಯುನಿಯನ್ ಕಾಂಗ್ರೆಸ್‌ನ (ಐಎನ್‌ಟಿಯುಸಿ) ಬಾಗಲಕೋಟೆ ಜಿಲ್ಲಾ ಅಧ್ಯಕ್ಷರನ್ನಾಗಿ ರಾಜ್ಯ ಅಧ್ಯಕ್ಷ ಡಾ.ಟಿ.ವೈ.ಕುಮಾರ ಅವರು ತಮ್ಮನ್ನು ನಿಯಮಿಸಿ ಆದೇಶ ಮಾಡಿದ್ದಾರೆ. ಪಕ್ಷ ನೀಡಿರುವ ಜವಾಬ್ದಾರಿ ಪ್ರಾಮಾಣಿಕವಾಗಿ ನಿರ್ವಹಿಸುವದಾಗಿ ತಿಳಿಸಿದರು.

ಜಿಲ್ಲೆಯಲ್ಲಿರುವ ಕೂಲಿಕಾರ್ಮಿಕರು, ಕಾರ್ಖಾನೆಗಳ ಕಾರ್ಮಿಕರು, ಬೀದಿಬದಿ ವ್ಯಾಪಾರಿಗಳು, ಅಸಂಘಟಿತ ಕಾರ್ಮಿಕರು, ಆಟೋಚಾಲಕರು ಸೇರಿದಂತೆ ವಿವಿಧ ಸ್ಥರದ ಕಾರ್ಮಿಕರ ಸಮಸ್ಯೆಗಳಿಗೆ ಸ್ಪಂಽಸಲು ಪಕ್ಷ ಜವಾಬ್ದಾರಿ ನೀಡಿದೆ. ಯಾವುದೇ ಸಮಸ್ಯೆ ಬಂದರೂ ಪಕ್ಷದ ನಿರ್ದೇಶನ ದಂತೆ ಸೇವೆ ಸಲ್ಲಿಸುವದಾಗಿ ತಿಳಿಸಿದರು. ೯೭೪೦೦೦೯೭೮೬ ದೂರವಾಣಿ ಸಂಖ್ಯೆಗೆ ಕರೆ ಮಾಡ ಬಹುದು ಎಂದು ಹೇಳಿದರು.

ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಪಕ್ಷದ ಸಂಘಟನೆಯಲ್ಲಿ ಶಕ್ತಿ ಮೀರಿ ಕಾರ್ಯ ಮಾಡುತ್ತೇನೆ. ಜಿಲ್ಲೆಯ ಎಲ್ಲ ಕ್ಷೇತ್ರದಲ್ಲಿನ ಪಕ್ಷದ ಶಾಸಕರ ಮಾಜಿ ಶಾಸಕರ ಸಹಕಾರದೊಂದಿಗೆ ತಾಲೂಕಾ ಪದಾಽಕಾರಿಗಳು ಆಯ್ಕೆ ಮಾಡಲಾಗುವುದು ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹೇಶ ಕೋಳಿ, ಅಲ್ಪಸಂಖ್ಯಾತರ ಘಟಕದ ತಾಲೂಕು ಅಧ್ಯಕ್ಷ ಶಫಿಕ್ ಬೇಪಾರಿ, ಅಬುಬಕರ ಕುಡಚಿ ಮಾತನಾಡಿದರು.

ಡಿಎಸ್‌ಎಸ್ ರಾಜ್ಯಾಧ್ಯಕ್ಷ ಶಾಮರಾವ ಘಾಟಗೆ, ನಗರಸಭೆ ಅಧ್ಯಕ್ಷ ಈಶ್ವರ ವಾಳೆಣ್ಣವರ, ಶಂಕರ ಪೂಜಾರಿ, ದಾವಲ ನದಾಫ್, ಶರೀಫ್ ಮುಲ್ಲಾ, ಹಣಮಂತ ತೇಲಿ, ಮಹಮದ್‌ಸಾದ್ ಪಾರ್ಥನಳ್ಳಿ, ಶಾಕೀರ ನದಾಫ್ ಇತರರು ಇದ್ದರು.