ಜಿಲ್ಲೆ

ಕಾರ್ಮಿಕರ ಬೇಡಿಕೆ ಈಡೇರಿಕೆಗೆ ಆಗ್ರಹ

ಕಲಬುರಗಿ: ಕಟ್ಟಡ ಕರ‍್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಬೆಳಗಾವಿ ಅಧಿವೇಶನದ ವೇಳೆ ಹೋರಾಟ ಮಾಡಿದ್ದಾಗ ಭರವಸೆ ನೀಡಿದ್ದ ಕರ‍್ಮಿಕ ಸಚಿವ ಸಂತೋಷ ಲಾಡ್​ ಇದುವರೆಗೆ ಯಾವುದೇ ಬೇಡಿಕೆ ಈಡೇರಿಸದ ಹಿನ್ನೆಲೆಯಲ್ಲಿ ಪುನ@ ಹೋರಾಟಕ್ಕೆ ಸಜ್ಜಾಗಿದ್ದು, ಜೂನ್​ನಲ್ಲಿ ಸಚಿವ ಲಾಡ್​ ಮನೆ ಎದುರು ಧರಣಿ ಮಾಡಲಾಗುವುದು ಎಂದು ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕರ‍್ಮಿಕರ ಸಂದ ರಾಜ್ಯಾಧ್ಯಕ್ಷ ಎಚ್​.ಜಿ.ಉಮೇಶ ಹೇಳಿದರು.

ಮೂರು ರ‍್ಷ ಸೇವೆ ಸಲ್ಲಿಸಿದ ೬೦ ರ‍್ಷ ಮೇಲ್ಪಟ್ಟ ವಯಸ್ಸಿನ ಕರ‍್ಮಿಕರಿಗೆ ಐದು ಸಾವಿರ ರೂ. ಪಿಂಚಣಿ ನೀಡಬೇಕು, ನಕಲಿ ಹೆಸರಿನಲ್ಲಿ ನೈಜ ಕರ‍್ಮಿಕರ ವಜಾ ಮಾಡುವುದು ನಿಲ್ಲಿಸಬೇಕು, ಶೈಕ್ಷಣಿಕ ಧನಸಹಾಯ ಮುಂದುವರಿಸಬೇಕು, ನೋಂದಣಿ, ನವೀಕರಣ ೋನ್​ ಮೂಲಕ ಮಾಡದೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಬೇಕು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಎಲ್ಲ ತರಹದ ಕಿಟ್​ ವಿತರಣೆ, ಆರೋಗ್ಯ ತಪಾಸಣೆ ನಿಲ್ಲಿಸಿ ನೇರ ಲಾನುಭವಿ ಖಾತೆಗೆ ಹಣ ಹಾಕಬೇಕು. ಐದು ರ‍್ಷ ಸೇವೆ ಸಲ್ಲಿಸಿದವರಿಗೆ ನಿವೇಶನ ನೀಡಬೇಕು, ಸೆಸ್​ನ್ನು ಶೇ.೨ ಹೆಚ್ಚಿಸಬೇಕು, ಸೆಸ್​ ಕಲೆಕ್ಟ್​ ಮಾಡದವರ ವಿರುದ್ಧ ಕ್ರಮ ಕೈಗೊಳ್ಳಬೇಕು, ಕವಚ ವ್ಯಾನ್​ ರದ್ದುಪಡಿಸಬೇಕು, ಅಪ್ರೂವಲ್​ ಆಗಿರುವ ಕ್ಲೆಮ್​ ರ‍್ಜಿಗಳನ್ನು ಒಂದು ರ‍್ಷದಿಂದ ಹಣ ಸಂದಾಯ ಮಾಡಿಲ್ಲ. ಕೂಡಲೇ ಮಾಡಬೇಕು ಎಂದು ಹಣ ಸಂದಾಯ ಮಾಡಬೇಕು ಎಂದು ಆಗ್ರಹಿಸಿದರು.

ಸಂದ ಜಿಲ್ಲಾಧ್ಯಕ್ಷ ಪ್ರಭುದೇವ ಯಳಸಂಗಿ ಮಾತನಾಡಿ, ಕಟ್ಟಡ ಕರ‍್ಮಿಕರಿಗೆ ನಿರಂತರ ಮೋಸ ಮಾಡಲಾಗುತ್ತದೆ. ಜಿಲ್ಲೆಯಲ್ಲಿ ಹಿಂದೆ ೩.೮೪ ಲಕ್ಷ ಕಟ್ಟಡ ಕರ‍್ಮಿಕರಿದ್ದರು, ಬೇಕಾಬಿಟ್ಟಿಯಾಗಿ ೨.೬೦ ಲಕ್ಷ ಕರ‍್ಡ್​ ರದ್ದು ಮಾಡಿದ್ದಾರೆ. ಸರಿಯಾಗಿ ಪರಿಶೀಲಿಸದೆ ಕರ‍್ಡ್​ ಮಾಡಿದ್ದಾರೆ. ಉದ್ಯೋಗ ಖಾತ್ರಿಗೆ ಹೋದರೆ ಕರ‍್ಡ್​ ಕಡಿತ ಮಾಡುತ್ತಿದ್ದಾರೆ. ನೈಜ ಕರ‍್ಮಿಕರಿಗೆ ನೆರವು ನೀಡಬೇಕು ಎಂದು ಮನವಿ ಮಾಡಿದರು.

ಜಿಲ್ಲಾ ಕರ‍್ಯರ‍್ಶಿ ಹಣಮಂತರಾವ ಅಟ್ಟೂರು, ಶಿವಲಿಂಗಮ್ಮ ಲೇಂಗಟಿಕರ್​, ಉತ್ತಮಕುಮಾರ ಇತರರಿದ್ದರು.