ಕಟ್ಟಡ ನಿರ್ಮಾಣ ಮತ್ತು ಇತರ ಕಾರ್ಮಿಕರ ಸಂಘದ ವತಿಯಿಂದ ಆಯೋಜಿಸಿದ್ದ ಕಾರ್ಮಿಕ ದಿನಾಚರಣೆಯಲ್ಲಿ ಕಾರ್ಮಿಕರನ್ನು ಸನ್ಮಾನಿಸಲಾಯಿತು. ಶ್ರೀಕ ಶ್ರೀನಿವಾಸ್, ಗುಂಡಣ್ಣ, ಸೈಯದ್, ಶಶಿಕುಮಾರ್, ರಾಜೇಶ್, ಶಿವಲಿಂಗಯ್ಯ, ಸಂಪತ್, ಅನಿಲ್, ಧನುಷ್ ಇದ್ದರು. 
ಜಿಲ್ಲೆ

ಕಾರ್ಮಿಕ ವರ್ಗ ಸಂಘಟಿತರಾಗಲಿ

ಮದ್ದೂರು: ಕಟ್ಟಡ ಕಾರ್ಮಿಕರು ಧರ್ಮ, ಜಾತಿ, ಸಂಕೋಲೆಯನ್ನು ಕಳಚಿ ಸಂಘಟಿತರಾಗಿ ನಮ್ಮ ದುಡಿಮೆಯ ಬೆವರಿನ ಪಾಲನ್ನು ಹೋರಾಟದ ಮೂಲಕ ಪಡೆಯಬೇಕಿದೆ ಎಂದು ಕಟ್ಟಡ ನಿರ್ಮಾಣ ಮತ್ತು ಇತರ ಕಾರ್ಮಿಕರ ಸಂಘದ ಅಧ್ಯಕ್ಷ ಶ್ರೀಕ ಶ್ರೀನಿವಾಸ್ ತಿಳಿಸಿದರು.

ಪಟ್ಟಣದಲ್ಲಿ ಸಂಘದ ವತಿಯಿಂದ ಮಂಗಳವಾರ ಆಯೋಜಿಸಿದ್ದ ಕಾರ್ಮಿಕರ ದಿನಾಚರಣೆ ಮತ್ತು ಪ್ರಸ್ತುತ ರಾಜಕೀಯ ಕುರಿತು ಆಯೋಜಿಸಿದ್ದ ಸಮಾಲೋಚನಾ ಸಭೆ ಉದ್ಘಾಟಿಸಿ ಮಾತನಾಡಿದರು.

ತಾಲೂಕಿನಲ್ಲಿ ಕಟ್ಟಡ ಕಾರ್ಮಿಕರು 5544(ಪುರುಷರು) ಹಾಗೂ 2155 ಮಹಿಳೆಯರು ನೋಂದಣಿಯಾಗಿದ್ದಾರೆ. ಆದರೆ ಇನ್ನು 20 ಸಾವಿರಕ್ಕೂ ಹೆಚ್ಚಿನ ಕಾರ್ಮಿಕರು ಇದ್ದಾರೆ ಎಂದು ಅಂದಾಜಿಸಲಾಗಿದೆ. ಇವರೆಲ್ಲರೂ ತಮ್ಮ ವೃತ್ತಿಯನ್ನು ನೋಂದಣಿ ಮಾಡುವ ಮೂಲಕ ಸಂಘಟಿತರಾಗಬೇಕಿದೆ ಎಂದರು.

ಈಗಾಗಲೇ ನೋಂದಣಿ ಮಾಡಿಸಿರುವ ಕಾರ್ಮಿಕರ ಪೈಕಿ ಅನೇಕ ಕಾರ್ಮಿಕರು ನವೀಕರಿಸದ ಕಾರಣ ಗುರುತಿನ ಚೀಟಿ ರದ್ದಾಗಿ ಸವಲತ್ತು ವಂಚಿತರಾಗಿದ್ದಾರೆ. ಇವರನ್ನು ಗುರುತಿಸಿ ಗುರುತಿನ ಚೀಟಿ ಮಾಡಿಸುವ ಕೆಲಸದಲ್ಲಿ ಶ್ರಮಿಸಲಾಗುತ್ತಿದೆ ಎಂದರು.
ಕೆಲವು ವರ್ಗದ ಕಾರ್ಮಿಕರನ್ನು ಸನ್ಮಾನಿಸಲಾಯಿತು. ಹೇಮಂತ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಗುಂಡಣ್ಣ, ಸೈಯದ್, ಶಶಿಕುಮಾರ್, ರಾಜೇಶ್, ಶಿವಲಿಂಗಯ್ಯ, ಸಂಪತ್, ಅನಿಲ್, ಧನುಷ್, ಮಹೇಶ್, ಭರತ್ ಇತರರಿದ್ದರು.