ಜಿಲ್ಲೆ

ಕಾರ್ಪೊರೇಟ್ ಬೆಂಬಲಿತ ಶಕ್ತಿಗಳನ್ನು ಸೋಲಿಸಿ

ರಮೇಶ ಮೇಳಕುಂದಾ

ಕಲಬುರಗಿ: ಲೋಕಸಭೆ ಚುನಾವಣೆಯಲ್ಲಿ ಕಾರ್ಮಿಕರ ವಿರೋಧಿ, ಕಾರ್ಪೊರೇಟ್ ಬೆಂಬಲಿತ ಕೋಮುವಾದಿ ಶಕ್ತಿಗಳನ್ನು ಮತ್ತು ಅದರ ಮೈತ್ರಿ ಕೂಟದ ಪಕ್ಷಗಳನ್ನು ಸೋಲಿಸಬೇಕು ಎಂದು ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು) ಅಧ್ಯಕ್ಷೆ ಎಸ್.ವರಲಕ್ಷ್ಮೀ ಮನವಿ ಮಾಡಿದರು.

ನರೇಂದ್ರ ಮೋದಿ ಸರ್ಕಾರ ಕಾರ್ಮಿಕರ ಹಿತ ಕಾಪಾಡುವಲ್ಲಿ ವಿಫಲವಾಗಿದೆ. ಹೊಸ ಕಾರ್ಮಿಕ ಸಂಹಿತೆ, ಕನಿಷ್ಠ ವೇತನ ಸಾರ್ವತ್ರಿಕಗೊಳಿಸಿ, ಸಕಾಲಿಕ ವೇತನ ಪಾವತಿ ಖಾತರಿಪಡಿಸಲಾಗುತ್ತಿದೆ ಎಂದು ಮೋದಿ ಹೇಳಿದ್ದರು. ಅದನ್ನು ನಂತರ ಮೋದಿ ಮರೆತ್ತಿದ್ದು, ಕಾರ್ಮಿಕರ ಹಿತ ಮರೆತ್ತಿದ್ದಾರೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ಮೋದಿ ಸರ್ಕಾರ ಜಾರಿಗೆ ತಂದಿರುವ ಕಾರ್ಮಿಕ ಸಂಹಿತೆಗಳು ಕಾರ್ಪೊರೇಟ್ ಕಂಪನಿಗಳಿಗೆ ಸುಲಭ ವ್ಯಾಪಾರಕ್ಕೆ ಅನುಕೂಲಕರವಾಗಿವೆ. ಔದ್ಯೋಗಿಕ ಸುರಕ್ಷತೆ, ಆರೋಗ್ಯ ಮತ್ತು ಕೆಲಸದ ಪರಿಸ್ಥಿತಿಗಳ ಸಂಹಿತೆಯೂ ಉದ್ಯೋಗದಾತರಿಗೆ ಅನುಕೂಲವಾಗಿದ್ದು, ಕಾರ್ಮಿಕರಿಗೇ ಏನೇನೂ ಇಲ್ಲದಂತಾಗಿದೆ ಎಂದು ಹೇಳಿದರು.
ಅಗತ್ಯ ವಸ್ತುಗಳ ಬೆಲೆ ಏರಿಕೆ ನಿಯಂತ್ರಿಸಬೇಕು, ಕೃಷಿ ಕಾನೂನು ವಾಪಸ್ ಪಡೆಯಬೇಕು, ಧರ್ಮನಿರಪೇಕ್ಷೆ ಮೌಲ್ಯ ಸಂರಕ್ಷಿಸಬೇಕು, ಖಾಸಗೀಕರಣ ಕೈಬಿಡಬೇಕು, ಕೆಲಸ ಅವಧಿ ಆರು ಗಂಟೆಗೆ ಮಿತಿಗೊಳಿಸಬೇಕು, ಸಮಾನ ಕೆಲಸಕ್ಕೆ ಸಮಾನ ವೇತನ ಖಾತ್ರಿಪಡಿಸಬೇಕು, ಕಾರ್ಮಿಕರಿಗೆ ವಸತಿ ಯೋಜನೆ ಜಾರಿಗೊಳಿಸಬೇಕು, ಕಲ್ಯಾಣ ಮಂಡಳಿ ನಿಧಿ ಕಟ್ಟಡ ಕಾರ್ಮಿಕರ ಸೌಲಭ್ಯಕ್ಕೆ ಮಾತ್ರ ಬಳಸಬೇಕು ಎಂಬುದು ಸೇರಿ ವಿವಿಧ ಹಕ್ಕೊತ್ತಾಯಗಳನ್ನು