ಜಿಲ್ಲೆ

ಕಾರ್-ಬಸ್ ನಡುವೇ ಮುಖಾಮುಖಿ ಡಿಕ್ಕಿ:ಮೂವರು ಸಾವು

ಕಾರ್-ಬಸ್ ನಡುವೇ ಮುಖಾಮುಖಿ ಡಿಕ್ಕಿ:ಮೂವರು ಸಾವು

ಚಿಕ್ಕೋಡಿ: ಕಾರು ಹಾಗೂ ಸಾರಿಗೆ ಬಸ್ ನಡುವೆ ಮುಖಾಮುಖಿ ಡಿಕ್ಕಿಯಾದ ಅಪಘಾತದಲ್ಲಿ ಕಾರಿನಲ್ಲಿದ್ದ ಮೂವರು ಸಾವಿಗಿಡಾದ ಘಟನೆ ಅಥಣಿ ತಾಲೂಕಿನ ಮುರುಗುಂಡಿ ಗ್ರಾಮದ ಹೊರವಲಯದಲ್ಲಿ ಭಾನುವಾರ ನಡೆದಿದೆ.

ಮೃತರು ಕಲಬುರಗಿ ಜಿಲ್ಲೆಯ ಅಫಜಲಪುರ ಗಿರೀಶ ಬಳೋರಗಿ,ರಾಹುಲ್ ಮ್ಯಾಲೇಶಿ, ಮತ್ತು ಸಂಗಪ್ಪ ಅಮರಗೊಂಡ ಎಂದು ತಿಳಿದು ಬಂದಿದೆ.

ಕಾರು ಮಹಾರಾಷ್ಟ್ರದ ಕೊಲ್ಹಾಪುರದಿಂದ ಅಫ್ಜಲ್ ಪುರಕ್ಕೆ ಹೊರಟಿತ್ತು. ಅಥಣಿ ಕಡೆಯಿಂದ ಕಾಗವಾಡ ಮಾರ್ಗವಾಗಿ ಬಸ್ಸು ಹೊರಟಿತ್ತು. ಈ ವೇಳೆ ಕಾರು ಮತ್ತು ಬಸ್ಸು ಮುಖಾಮುಖಿ ಡಿಕ್ಕಿಯಾದ ಪರಿಣಾಮ ಅವಗಢ ಸಂಭಂವಿಸಿದೆ.

ಬಸ್ಸಿನಲ್ಲಿನ ಗಾಯಾಳುಗಳನ್ನು ಅಥಣಿ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.

ಅಥಣಿ ಪೊಲೀಸ್ ಠಾಣಾ ಘಟನೆ ನಡೆದಿದೆ.