ಜಿಲ್ಲೆ

ಕಾರೇಹಳ್ಳಿಯಲ್ಲಿ ಆಂಬುಲೆನ್ಸ್ ಸೇವೆಗೆ ಚಾಲನೆ

ಎ. ಆರ್. ರಘುರಾಮ

ಬಾಗೂರು: ಶಿಥಿಲಾವಸ್ಥೆಯಲ್ಲಿರುವ ಕಾರೇಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಅಭಿವೃದ್ಧಿಗೆ ಕ್ರಮ ವಹಿಸಲಾಗುವುದು ಎಂದು ಶಾಸಕ ಬಾಲಕೃಷ್ಣ ಭರವಸೆ ನೀಡಿದರು.
ಆರೋಗ್ಯ ಕೇಂದ್ರದ ಆವರಣದಲ್ಲಿ ಭಾನುವಾರ ಆಂಬುಲೆನ್ಸ್ ಸೇವೆಗೆ ಚಾಲನೆ ನೀಡಿ ಮಾತನಾಡಿದರು. ಆಸ್ಪತ್ರೆ ಕಟ್ಟಡ ಅಭಿವೃದ್ಧಿ ಕಾಮಗಾರಿಗೆ 7 ಲಕ್ಷ ರೂ. ಹಣ ಬಿಡುಗಡೆ ಮಾಡಬೇಕು ಎಂದು ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಅನುದಾನ ಬಂದ ನಂತರ ಕಾಮಗಾರಿಗೆ ಚಾಲನೆ ನೀಡಲಾಗುತ್ತದೆ ಎಂದರು.
ಕಾರೆಹಳ್ಳಿ ಗಡಿಭಾಗದಲ್ಲಿರುವ ಗ್ರಾಮ. ಇಲ್ಲಿ ತುರ್ತು ಸೇವೆಗೆ ವಾಹನ ಒದಗಿಸುವುದರಿಂದ ಈ ಭಾಗದ ಜನರಿಗೆ ಅನುಕೂಲವಾಗುತ್ತದೆ. ಚನ್ನರಾಯಪಟ್ಟಣ ಅಥವಾ ತಿಪಟೂರು ಆಸ್ಪತ್ರೆಗಳಿಗೆ ರೋಗಿಗಳನ್ನು ತುರ್ತು ಚಿಕಿತ್ಸೆಗೆ ಸಾಗಿಸಲು ನೆರವಾಗಲಿದೆ ಎಂದರು. ಹೆಚ್ಚಿನ ಸೇವೆಗೆ ನುಗ್ಗೇಹಳ್ಳಿಯಲ್ಲಿರುವ 108 ವಾಹನದ ಸೇವೆಯನ್ನೂ ಉಪಯೋಗಿಸಿಕೊಳ್ಳುವಂತೆ ಸಲಹೆ ನೀಡಿದರು.
ಡಾ. ಎಚ್.ಎಲ್. ದರ್ಶನ್, ಗ್ರಾಮ ಪಂಚಾಯತಿ ಉಪಾಧ್ಯಕ್ಷ ಸತೀಶ, ಮುಖಂಡರಾದ ನಟೇಶ, ರಾಮಚಂದ್ರು, ವೆಂಕಟೇಶ, ತ್ಯಾಗರಾಜ್, ಕುಮಾರ್, ಜಗದೀಶ, ಕಾಂತರಾಜು, ನಾಗೇಶ, ಅಶ್ವಿನಿ, ಸೌಭಾಗ್ಯಾ, ರಮ್ಯಾ ಇತರರು ಹಾಜರಿದ್ದರು.