ಹಾಸನ : ಕಾರು ಹಾಗು ಬೈಕ್ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟಿದ್ದು ಹಿಂಬದಿ ಕುಳಿತಿದ್ದ ಮಹಿಳೆ ಗಾಯಗೊಂಡಿರುವ ಘಟನೆ ತಾಲೂಕಿನ ಗೊರೂರಿನಲ್ಲಿ ಶುಕ್ರವಾರ ನಡೆದಿದೆ.
ಅರಕಲಗೂಡು ತಾಲ್ಲೂಕು ಮದ್ಲಾಪುರ ಗ್ರಾಮದ ಚಂದ್ರೇಗೌಡ (61) ಮೃತರು.
ಪತ್ನಿ ರಾಧಮ್ಮ ಅವರೊಂದಿಗೆ ಚಂದ್ರೇಗೌಡ ಕಟ್ಟಾಯ ಸಮೀಪದ ಕಲ್ಲಹಳ್ಳಿಗೆ ತೆರಳುತ್ತಿದ್ದಾಗ ಗೊರೂರು ಪೆಟ್ರೋಲ್ ಬಂಕ್ ಹತ್ತಿರ ಎದುರುಗಡೆಯಿಂದ ಬಂದ ಕಾರು ಡಿಕ್ಕಿಯಾಗಿದೆ. ಬೈಕ್‌ನಿಂದ ಕೆಳಗೆ ಬಿದ್ದ ಚಂದ್ರೇಗೌಡ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಾಯಾಳು ರತ್ನಮ್ಮ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗೊರೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.