ಅರಸೀಕೆರೆ : ನಿರ್ಲಕ್ಷೃತನದಿಂದ ಚಾಲನೆ ಪರಿಣಾಮ ಕಾರು ಮರಕ್ಕೆ ಡಿಕ್ಕಿ ಹೊಡೆದು ಒಂದು ವರ್ಷದ ಮಗು ಮೃತಪಟ್ಟಿರುವ ಘಟನೆ ತಾಲ್ಲೂಕಿನ ಬೆಳುವಳ್ಳಿ ಗ್ರಾಮದ ಸಮೀಪ ಶನಿವಾರ ನಡೆದಿದೆ.
ಜಾವಗಲ್ ನಿವಾಸಿ ಜೆ.ಜೆ.ಭರತ್ ಹಾಗು ಸಿಂಧು ಎಂಬುವವರ ಪುತ್ರ ಚಿರಿತ್ (1) ಮೃತ ದುರ್ದೈವಿ. ಕಾರ್ಯನಿಮಿತ್ತ ಕಾರಿನಲ್ಲಿ ಅರಸೀಕೆರೆಗೆ ತೆರಳಿದ್ದ ಇವರು ವಾಪಾಸ್ ಬರುವಾಗ ಅಪಘಾತ ಸಂಭವಿಸಿದೆ. ಬೆಳುವಳ್ಳಿ ಹತ್ತಿರ ರಾಷ್ಟ್ರೀಯ ಹೆದ್ದಾರಿ 234ರಲ್ಲಿ ಹಸು ಅಡ್ಡ ಬಂದಿದ್ದರಿಂದ ಡಿಕ್ಕಿಯಾಗುವುದನ್ನು ತಪ್ಪಿಸಲು ಏಕಾಏಕಿ ಎಡಕ್ಕೆ ತಿರುಗಿಸಿದ ಪರಿಣಾಮ ತೆಂಗಿನ ಮರಕ್ಕೆ ಡಿಕ್ಕಿಯಾಗಿದೆ. ದಂಪತಿಗಳಿಬ್ಬರಿಗೂ ಸಣ್ಣಪುಟ್ಟ ಗಾಯಗಳಾಗಿದ್ದು ಮಗುವಿನ ಪ್ರಜ್ಞೆ ತಪ್ಪಿತ್ತು. ಸ್ಥಳೀಯರು ಕೂಡಲೇ ಮೂವರಿಗೆ ಜಾವಗಲ್ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹಾಸನ ಆಸ್ಪತ್ರೆಗೆ ಕರೆತಂದರಾದರೂ ಮಗುವನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಜಾವಗಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.