ಜಿಲ್ಲೆ

ಕಾರು ಮಗುಚಿ ಬಿದ್ದು ಇಬ್ಬರಿಗೆ ಗಾಯ

ಹನೂರು: ಹನೂರಿನ ಮೂಲಕ ಮಲೆಮಹದೇಶ್ವರ ಬೆಟ್ಟಕ್ಕೆ ಸಂಪರ್ಕ ಕಲ್ಪಿಸುವ ಎಲ್ಲೇಮಾಳ ಮಾರ್ಗದ ರಸ್ತೆಯಲ್ಲಿ ಶನಿವಾರ ಚಾಲಕ ನಿಯಂತ್ರಣ ತಪ್ಪಿದ ಪರಿಣಾಮ ಕಾರೊಂದು ಮಗುಚಿ ಬಿದ್ದಿದ್ದು, ಇಬ್ಬರು ಗಾಯಗೊಂಡಿದ್ದಾರೆ.

ಬೆಂಗಳೂರಿನ ಕಗ್ಗಲಿಪುರದ ನಿವಾಸಿ ಲಕ್ಷ್ಮಮ್ಮ (55) ಹಾಗೂ ಪವಿತ್ರಾ (24) ಗಾಯಗೊಂಡವರು. ಇವರು ದೇವರ ದರ್ಶನಕ್ಕಾಗಿ ಮ.ಬೆಟ್ಟಕ್ಕೆ ತೆರಳುತ್ತಿದ್ದರು. ಬೆಳಗ್ಗೆ 8 ಗಂಟೆ ಸಮಯದಲ್ಲಿ ಎಲ್ಲೇಮಾಳದ ರಸ್ತೆಯಲ್ಲಿ ಚಾಲಕ ನಿಯಂತ್ರಣ ತಪ್ಪಿದ್ದಾನೆ ಎನ್ನಲಾಗಿದೆ. ಪರಿಣಾಮ ಕಾರು ರಸ್ತೆ ಬದಿಗೆ ಮಗುಚಿ ಬಿದ್ದು ಇಬ್ಬರು ಗಾಯಗೊಂಡಿದ್ದರೆ. ಬಳಿಕ ಇವರನ್ನು ಸ್ಥಳೀಯರು ತುರ್ತು ವಾಹನದ ಮೂಲಕ ಕಾಮಗೆರೆ ಖಾಸಗಿ ಆಸ್ಪತ್ರೆಗೆ ಕಳುಹಿಸಿ ಕೊಟ್ಟರು. ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.