ಗೋಕರ್ಣ: ಇಲ್ಲಿನ ಚೌಡಗೆರೆ ಕ್ರಾಸ್ ಹತ್ತಿರ ಬುಧವಾರ ರಾತ್ರಿ ಸಂಭವಿಸಿದ ಕಾರು ಅಪಘಾತದಲ್ಲಿ ಅಗ್ರಗೋಣದ ಗೌರವ ದೇವರಾಯ ಗೋಳಿಕಟ್ಟೆ (25) ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಅಗ್ರಗೋಣದಿಂದ ಅಂಕೋಲಾಕ್ಕೆ ಹೋಗುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಅವರು ಚಲಾಯಿಸುತ್ತಿದ್ದ ಕಾರು ಪಲ್ಟಿಯಾಗಿ ರಸ್ತೆ ಪಕ್ಕದ ಆಳವಾದ ಕಲ್ಲುಗಣಿಯಲ್ಲಿ ಬಿದ್ದಿದೆ. ಕಾರಿನಲ್ಲಿದ್ದ ಇತರ ಮೂವರಿಗೆ ಗಾಯಗಳಾಗಿವೆ.