ಜಿಲ್ಲೆ

ಕಾರು ಪಲ್ಟಿಯಾಗಿ ಇಬ್ಬರ ಸಾವು

ಚಿತ್ರದುರ್ಗ:ಚಿತ್ರದುರ್ಗ ತಾಲೂಕು ಕೆ.ಬಳ್ಳೆಕಟ್ಟೆ್ಟ ಕೆರೆ ಸಮೀಪ ರಾ.ಹೆ.48ರಲ್ಲಿ ಕಾರು ಪಲ್ಟಿಯಾಗಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಮಂಗಳವಾರ ಮಧ್ಯಾಹ್ನ ನಡೆದಿದೆ. ಮೃತರನ್ನು ವೆಲ್ಲಪಾಂಡಿ (44)ಹಾಗೂ ಮುತ್ತು (88)ಎಂದು ಗುರುತಿಸಲಾಗಿದೆ. ಚಿತ್ರದುರ್ಗ ಕಡೆಯಿಂದ ದಾವಣಗೆರೆ ಕಡೆಗೆ ತೆರಳುತ್ತಿದ್ದ ಮಹಾರಾಷ್ಟ್ರ ಮೂಲದ ಕಾರಿನ(ಎಂಎಚ್ 12 ಟಿಎಸ್ 5846) ಚಕ್ರವೊಂದು ಸಿಡಿದು ಈ ಅವಘಡ ವಾಗಿದೆ. ಭರಮಸಾಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.