ಜಿಲ್ಲೆ

ಕಾರು ಡಿಕ್ಕಿಯಾಗಿ ಆಟೋ ಚಾಲಕ ಸಾವು

ಸಕಲೇಶಪುರ : ಎದುರುಗಡೆಯಿಂದ ಬಂದ ಕಾರು ಡಿಕ್ಕಿಯಾಗಿ ಆಟೋ ಚಾಲಕ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತಾಲೂಕಿನ ಕೆಂಪುಹೊಳೆ ಸಮೀಪ ಶನಿವಾರ ನಡೆದಿದೆ.

ಮೈಸೂರಿನ ನಜರಾಬಾದ್‌ನ ಉಮೇಶ್ ಮೃತರು. ಧರ್ಮಸ್ಥಳಕ್ಕೆ ಆಟೋದಲ್ಲಿ ತೆರಳುತ್ತಿದ್ದರು.

ಶಿರಾಡಿ ಘಾಟ್‌ನ ಕೆಂಪುಹೊಳೆ ಸಮೀಪ ಹೋಗುತ್ತಿದ್ದಾಗ ಮಂಗಳೂರು ಕಡೆಯಿಂದ ಬಂದ ಇನ್ನೋವಾ ಕಾರು ಡಿಕ್ಕಿಯಾಗಿದೆ. ಅಪಘಾತದ ರಭಸಕ್ಕೆ ಆಟೋ ಪಲ್ಟಿಯಾಗಿ ಗಂಭೀರ ಗಾಯಗೊಂಡಿದ್ದ ಉಮೇಶ್ ಮೃತಪಟ್ಟಿದ್ದಾರೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.