ಜಿಲ್ಲೆ

ಕಾರು ಡಿಕ್ಕಿ ಹೊಡೆದು ವೃದ್ಧೆ ಸಾವು

ಕೊಪ್ಪ: ನಿಲುವಾಗಿಲು ಸಮೀಪದ ಕಾಳನಾಯಕನ ಕಟ್ಟೆಯಲ್ಲಿ ಬಸ್‌ಗಾಗಿ ಕಾಯುತ್ತ ಮೋರಿ ಮೇಲೆ ಕುಳಿತಿದ್ದ ವೃದ್ಧೆಗೆ ಕಾರು ಡಿಕ್ಕಿ ಹೊಡೆದಿದ್ದರಿಂದ ವೃದ್ಧೆ ಮೃತಪಟ್ಟಿದ್ದಾರೆ.

ಕಾಳನಾಯಕನ ಕಟ್ಟೆ ಗ್ರಾಮದ ಪದ್ದಮ್ಮ (80) ಮೃತ ದುರ್ದೈವಿ. ಗಾಜನೂರಿಗೆ ತೆರಳುವ ಸಲುವಾಗಿ ಮಗಳು ವಿನೋದಾ ಜತೆ ಬುಧವಾರ ಬಸ್‌ಗಾಗಿ ಮೋರಿ ಮೇಲೆ ಕುಳಿತಿದ್ದರು. ಹರಿಹರಪುರ ಕಡೆಯಿಂದ ವೇಗವಾಗಿ ಬಂದ ಕಾರು ಮೋರಿಗೆ ಡಿಕ್ಕಿ ಹೊಡೆದಿದೆ. ಇದರಿಂದ ಪದ್ದಮ್ಮ ಅವರಿಗೆ ತೀವ್ರ ಪೆಟ್ಟಾಗಿತ್ತು. ಜತೆಗೆ ಅಲ್ಲೇ ನಿಂತಿದ್ದ ಅಲ್ಲಾವುದ್ದೀನ್ ಅವರಿಗೂ ಡಿಕ್ಕಿ ಹೊಡೆದಿದೆ. ಪದ್ದಮ್ಮ ಅವರನ್ನು ಕೊಪ್ಪ ಸಾರ್ವಜನಿಕ ಆಸ್ಪತ್ರೆಗೆ ಕರೆದುಕೊಂಡು ಬರುವಷ್ಟರಲ್ಲಿ ಮೃತಪಟ್ಟಿದ್ದರು. ಹರಿಹರಪುರ ಠಾಣೆಯಲ್ಲಿ ಕಾರು ಚಾಲಕ ಮಂಜುನಾಥ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.