ಭಟ್ಕಳ: ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಡಿವೈಡರ್ ಗೆ ಢಿಕ್ಕಿ ಹೊಡೆದ ಪರಿಣಾಮ ಚಾಲಕ ಸಾವನ್ನಿಪ್ಪಿದ್ದು, ಮೂವರು ಗಾಯಗೊಂಡ ಘಟನೆ ಮೂಡಭಟ್ಕಳ ಬೈಪಾಸ್ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ ತಡ ರಾತ್ರಿ ನಡೆದಿದೆ.
ರಂಗಿನಕಟ್ಟೆ ನಿವಾಸಿ ಉನೈಜ್ ಹಮ್ಜದ್ ಖತೀಬ್ (20) ಮೃತ ವ್ಯಕ್ತಿ. ಮೊಹಮ್ಮದ್ ಫುರ್ಖಾನ್ ಅಲಿ ಬಾಷಾ, ಮೊಹಮ್ಮದ್ ಸುಹೇಲ್ ಸಿರಾಜ್ ಗೋಲಿವಲೆ ತೀವ್ರವಾಗಿ ಗಾಯಗೊಂಡಿದ್ದು, ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಸೈಯದ್ ಇಸ್ಮಾಯಿಲ್ ಇಬ್ರಾಹಿಂ ಲಂಕಾ ಮತ್ತು ಅಬ್ದುಲ್ ರೆಹಮಾನ್ ಬಾಸಿತ್ ಆಕ್ರಮಿ ಅವರನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗಿದೆ. ಅಂಜುಮನ್ ಇಂಜಿನಿಯರಿಂಗ್ ಕಾಲೇಜ್ ನ ವಿದ್ಯಾರ್ಥಿಗಳಾಗಿದ್ದಾರೆ.
ಗೆಳೆಯರು ತಡರಾತ್ರಿ ಪರೀಕ್ಷೆಗೆ ತಯಾರಿ ಮುಗಿಸಿ ಟೀ ಕುಡಿಯಲು ಮನೆಯಿಂದ ಹೊರಟಿದ್ದು, ಶಿರೂರು ಚೆಕ್ ಪೋಸ್ಟ್ ಬಳಿಯ ಸ್ಟಾಲ್‌ನಲ್ಲಿ ಚಹಾ ಕಡಿದು ಹಿಂತಿರುಗಿ ಭಟ್ಕಳ ಕಡೆಗೆ ಬರುವಾಗ ಈ ಅಪಘಾತ ಸಂಭವಿಸಿದೆ. ಭಟ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.