ಸಿದ್ದಾಪುರ(ಉತ್ತರ ಕನ್ನಡ): ಕಾರುಗಳ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿ ಆರು ಜನ ತೀವ್ರವಾಗಿ ಗಾಯಗೊಂಡ ಘಟನೆ ತಾಲೂಕಿನ ಕಾವಂಚೂರು ಕ್ರಾಸ್ ಬಳಿ ಗುರುವಾರ ನಡೆದಿದೆ.
ಗಾಯಾಳುಗಳನ್ನು ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಸಿದ್ದಾಪುರದಿಂದ ಸಾಗರ ಕಡೆ ಹೊರಟಿದ್ದ ಅಲ್ಟೊ-800 ಕಾರಿನಲ್ಲಿದ್ದ
ವಿನಾಯಕ ನಾಯ್ಕ ಹೊಸೂರು,
ಸರೋಜಾ ನಾಯ್ಕ, ಬಿಂದುಶ್ರೀ,ಶೈಲಶ್ರೀ ,ಮೋಹನ ನಾಯ್ಕ ಬೇಡ್ಕಣಿ
ಕಾರು ಚಾಲಕ ರಾಘವೇಂದ್ರ ಮಡಿವಾಳ ಹೊಸೂರು ತೀವ್ರ ಗಾಯಗೊಂಡಿದ್ದಾರೆ.
ಐ-10 ಕಾರಿನ ಚಾಲಕ, ಕೆಎಸ್ ಆರ್ ಟಿಸಿ ನೌಕರ, ಭದ್ರಾವತಿಯ ಸಾದಿಕ್ ಮೌಲಾಸಾಬ್ ವಿರುದ್ಧ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.