ಕಲಬುರಗಿ:ಲೋಕಸಭೆ ಚುನಾವಣೆ ಪ್ರಚಾರಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ರೋಡ್ ಶೋ ನಿಗದಿಯಾಗಿದ್ದರಿಂದ ಸಾವಿರಾರು ಜನರು ಬಿರು ಬಿಸಿಲಿನಲ್ಲಿ ಸಿದ್ದಿಬಾಷಾ ದರ್ಗಾದಿಂದ ಎನ್‌ವಿ ಆವರಣದವರೆಗೆ ಕಾದು ನಿಂತ್ತಿದ್ದರು. ಆದರೆ ಮೋದಿ ಸಿ ಕಾರ್‌ನಿಂದ ಹೊರಬಾರದೆ ಎಲ್ಲರಲ್ಲೂ ನಿರಾಶೆ ಮೂಡಿಸಿದರು. ಬಿಜೆಪಿ ಬಾವುಟ ಹಿಡಿದು ಅಭಿಮಾನಿಗಳು, ಕಾರ್ಯಕರ್ತರು, ಬೆಂಬಲಿಗರು ಗುಂಪು ಗುಂಪಾಗಿ ಮೋದಿಗೆ ಜೈಕಾರ ಹಾಕಿದರು. ತಲೆ ಮೇಲೆ ಆಸರೆಗೆ ಟೋಪಿ, ಕರ್ಚಿಫ್, ಕ್ಯಾಪ್ ಧರಿಸಿ ನೆಚ್ಚಿನ ನಾಯಕ ನೋಡಲು ಕಾದಿದ್ದರು. ಆದರೆ ಮಧ್ಯಾಹ್ನ ೨ ಗಂಟೆಗೆ ಆಗಮಿಸಿದ ಮೋದಿ ಭದ್ರತಾ ಪಡೆಗಳ ಬೆಂಗಾವಲು ವಾಹನದೊಂದಿಗೆ ಆಗಮಿಸಿದ್ದು, ಕಾರಿನಲ್ಲೇ ಕುಳಿತು ರಸ್ತೆ ಬದಿ ಕುಳಿತ್ತಿದ್ದ ಜನರತ್ತ ಕೈ ಬೀಸುತ್ತ ಕಾರ್ ಶೋ ನಡೆಸಿದರು.