ಜಿಲ್ಲೆ

ಕಾರಿನ ಗಾಜು ಒಡೆದು 6 ಲಕ್ಷ ರೂ. ಕಳವು

ಮೈಸೂರು: ರಾಮಕೃಷ್ಣನಗರದ ಉಪ ನೋಂದಣಾಧಿಕಾರಿ ಕಚೇರಿ ಎದುರು ನಿಲ್ಲಿಸಿದ್ದ ಕಾರಿನ ಹಿಂದಿನ ಗಾಜನ್ನು ಒಡೆದ ದುಷ್ಕರ್ಮಿಗಳು ಅಲ್ಲಿದ್ದ 6 ಲಕ್ಷ ರೂ. ಹಣ ಕದ್ದಿದ್ದಾರೆ.

ಮೈಸೂರು ತಾಲೂಕಿನ ಹೆಳವರಹುಂಡಿ ನಿವಾಸಿ, ಗುತ್ತಿಗೆದಾರ ಕುಮಾರಸ್ವಾಮಿ ಹಣ ಕಳೆದುಕೊಂಡವರು.

ನೋಂದಣಿ ಕೆಲಸದ ನಿಮಿತ್ತ ಇವರು ಇಲ್ಲಿಗೆ ಕಾರಿನಲ್ಲಿ ಬಂದಿದ್ದರು. ನಂತರ ಸ್ನೇಹಿತರೊಂದಿಗೆ ಕಚೇರಿ ಒಳಗೆ ತೆರಳಿದ್ದಾರೆ. ವಾಪಸ್ ಬಂದು ನೋಡಿದಾಗ ಕಾರಿನ ಹಿಂದಿನ ಗಾಜು ಒಡೆದಿತ್ತು.

ಕಳ್ಳರು ಅದರಲ್ಲಿದ್ದ ಹಣ ದೋಚಿಕೊಂಡು ಹೋಗಿದ್ದಾರೆ ಎಂದು ದೂರು ನೀಡಿದ್ದು, ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.