ಯಳಂದೂರು: ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣವಾಗಿರುವ ಬಿಳಿಗಿರಿರಂಗನ ಬೆಟ್ಟದ ಶ್ರೀ ಬಿಳಿಗಿರಿರಂಗನಾಥ ಸ್ವಾಮಿ ದೇಗುಲದ ಆವರಣದಲ್ಲಿ ಭಕ್ತರು ಸರತಿ ಸಾಲು ನಿಲ್ಲುವ ಕಾರಿಡಾರ್ ಹಾಗೂ ತೆಂಗಿನಕಾಯಿ ಒಡೆಯುವ ಸ್ಥಳಕ್ಕೆ ನಂಜನಗೂಡು ವಿಧಾನಸಭಾ ಕ್ಷೇತ್ರದ ಶಾಸಕ ದರ್ಶನ್ ಧ್ರುವನಾರಾಯಣ ಅವರು ಸ್ವಂತ ಹಣದಿಂದ 17.40 ಲಕ್ಷ ರೂ.ವೆಚ್ಚದಲ್ಲಿ ಶೆಲ್ಟರ್ ಅಳವಡಿಸಿಕೊಟ್ಟಿದ್ದಾರೆ.
ಮನೆ ದೇವರಾದ ಶ್ರೀ ಬಿಳಿಗಿರಿರಂಗನಾಥ ಸ್ವಾಮಿ ದೇಗುಲಕ್ಕೆ ಶ್ರಾವಣ ಮಾಸದ ಕೊನೆಯ ಶನಿವಾರ ಶಾಸಕ ದರ್ಶನ್ ಭೇಟಿ ನೀಡಿದ್ದರು. ದಿ.ಆರ್.ಧ್ರುವನಾರಾಯಣ ಅವರು ಇಲ್ಲಿಗೆ ಶೆಲ್ಟರ್ ನಿರ್ಮಿಸಿ ಭಕ್ತರಿಗೆ ಅನುಕೂಲ ಮಾಡಿಕೊಡಲು ಕ್ರಮ ವಹಿಸುವ ಭರವಸೆ ನೀಡಿದ್ದರು. ಅದರಂತೆ ಶಾಸಕ ದರ್ಶನ್ ಶೆಲ್ಟರ್ ನಿರ್ಮಾಣಕ್ಕೆ ಮುಂದಾಗಿದ್ದರು. ಇದೀಗ ಶೆಲ್ಟರ್ ಅಳವಡಿಕೆ ಕಾರ್ಯ ಪೂರ್ಣಗೊಂಡಿದ್ದು ಸ್ಥಳೀಯರು ಹಾಗೂ ಭಕ್ತರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ನಂಜನಗೂಡು ಶಾಸಕ ದರ್ಶನ್ ಧ್ರುವನಾರಾಯಣ ಅವರು ದೇಗುಲಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಭಕ್ತರು ತಮ್ಮ ತಂದೆಯವರು ಇಲ್ಲಿನ ದರ್ಶನ ಪಡೆಯುವ ಭಕ್ತರಿಗೆ ನೆರಳು ಮಾಡಲು ಆಸಕ್ತಿ ಹೊಂದಿದ್ದರು ಎಂದು ತಿಳಿಸಿದ್ದರು. ಅದರಂತೆ ಶೆಲ್ಟರ್ ನಿರ್ಮಿಸಿಕೊಟ್ಟಿದ್ದಾರೆ ಎಂದು ಕಾಂಗ್ರೆಸ್ ಪದವೀಧರ ವಿಭಾಗದ ಜಿಲ್ಲಾಧ್ಯಕ್ಷ ಸಿ.ವೆಂಕಟೇಶ್ ತಿಳಿಸಿದರು.
-----------
14 ವೈಎಲ್‌ಡಿ ಚಿತ್ರ 01,02,03 ಯಳಂದೂರು ತಾಲೂಕಿನ ಶ್ರೀ ಬಿಳಿಗಿರಿರಂಗನಾಥ ಸ್ವಾಮಿ ದೇಗುಲದ ಆವರಣದಲ್ಲಿ ಸರತಿ ಸಾಲಿನಲ್ಲಿ ದೇವರ ದರ್ಶನ ಪಡೆಯಲು, ಮಳೆ, ಬಿಸಿಲಿನಿಂದ ರಕ್ಷಿಸುವಂತೆ ಶೆಲ್ಟರ್ ನಿರ್ಮಿಸಿರುವುದು.