ಜಿಲ್ಲೆ

ಕಾರಾಗೃಹದಲ್ಲಿ ಮಾಸ್ಕ್ ತಯಾರಿಕೆ

ಧಾರವಾಡ: ಕರೊನಾ ವೈರಸ್ ಹರಡುವಿಕೆ ತಡೆಯá-ವ ನಿಟ್ಟಿನಲ್ಲಿ ಹಗಲಿರುಳು ಶ್ರಮಿಸುತ್ತಿರುವ ಜನರ ಆರೋಗ್ಯದ ದೃಷ್ಟಿಯಿಂದ ನಗರದ ಕೇಂದ್ರ ಕಾರಾಗೃಹದ ಸಿಬ್ಬಂದಿ ಹಾಗೂ ಕೈದಿಗಳು ಮಾಸ್ಕ್ ತಯಾರಿಸಿದ್ದಾರೆ.

ಕೇಂದ್ರ ಕಾರಾಗೃಹದ ಸಿಬ್ಬಂದಿ ಹಾಗೂ 6 ಕೈದಿಗಳು ಸೇರಿ 10 ದಿನಗಳಲ್ಲಿ 4000 ಮಾಸ್ಕ್ ಸಿದ್ಧಪಡಿಸಿದ್ದಾರೆ. ಈ ಮಾಸ್ಕ್ ಗಳನ್ನು ಪೊಲೀಸ್ ಸಿಬ್ಬಂದಿ, ಬ್ಯಾಂಕ್, ಅಂಚೆ ಕಚೇರಿ, ಕೇಂದ್ರ ಕಾರಾಗೃಹ ಅಧೀನದಲ್ಲಿನ ಜೈಲು ಸಿಬ್ಬಂದಿ ಸೇರಿ ಇತರ ಕಡೆಗಳಲ್ಲಿ ವಿತರಣೆ ಮಾಡಲಿದ್ದಾರೆ. ಎಲ್ಲ ಮಾಸ್ಕ್​ಗಳನ್ನು ಸ್ವತಃ ಸಿಬ್ಬಂದಿ ಹಾಗೂ ಕೈದಿಗಳೇ ತಯಾರಿಸಿದ್ದಾರೆ. ಮುಂದಿನ ಮೂರು ದಿನಗಳಲ್ಲಿ 5000 ಮಾಸ್ಕ್​ಗಳನ್ನು ತಯಾರಿಸುವ ಗುರಿ ಹೊಂದಲಾಗಿದೆ. ಅವುಗಳನ್ನು ಸಹ ಅಗತ್ಯ ಇರುವ ಕಡೆಗಳಲ್ಲಿ ವಿತರಣೆ ಮಾಡಲು ಯೋಚಿಸಲಾಗಿದೆ ಎಂದು ಜೈಲು ಅಧೀಕ್ಷಕಿ ಅನಿತಾ ಆರ್. ತಿಳಿಸಿದ್ದಾರೆ.