ಚನ್ನರಾಯಪಟ್ಟಣ: ಚನ್ನರಾಯಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಮಾಜಶಾಸ್ತ್ರ ವಿಭಾಗದ ವತಿಯಿಂದ ಅಪರಾಧ ಮತ್ತು ಜೈಲು ವ್ಯವಸ್ಥೆಯ ಕುರಿತು ಮಾಹಿತಿ ಪಡೆಯಲು ಶನಿವಾರ ಅಂತಿಮ ಬಿಎ ವಿದ್ಯಾರ್ಥಿಗಳು ಹಾಸನದ ಜಿಲ್ಲಾ ಕಾರಾಗೃಹಕ್ಕೆ ಭೇಟಿ ನೀಡಿದರು.
ಜೈಲರ್ ಅನಿಲ್ ಕುಮಾರ್ ಬಡಿಗರ್ ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ದೈನಂದಿನ ಜೈಲು ಕಾರ್ಯಾಚರಣೆಗಳು, ಭದ್ರತಾ ಪ್ರೋಟೋಕಾಲ್‌ಗಳು, ಕಾನೂನು ನೆರವು ಸೇವೆಗಳ ಕುರಿತು ಸಮಗ್ರ ಮಾಹಿತಿ ನೀಡಿದರು. ವಿದ್ಯಾರ್ಥಿಗಳು ಅಧಿಕಾರಿಗಳೊಂದಿಗೆ ನೇರವಾಗಿ ಸಂವಹನ ನಡೆಸುವ ಮೂಲಕ, ಜೈಲು ವ್ಯವಸ್ಥೆಯೊಳಗಿನ ಅಡುಗೆ ಮನೆ, ಗ್ರಂಥಾಲಯ, ಅವರ ಅನುಭವಗಳು ಮತ್ತು ಸವಾಲುಗಳ ಬಗ್ಗೆ ಮಾಹಿತಿ ಪಡೆದರು.
ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ.ಕೆ.ಬಿ.ಆಶಾ ಅವರು, ತರಗತಿಯ ಅಧ್ಯಯನಗಳಿಗೆ ಪೂರಕವಾಗಿ ಮತ್ತು ಕಾನೂನು ವ್ಯವಸ್ಥೆಯ ಸಮಗ್ರ ತಿಳಿವಳಿಕೆ ಬೆಳೆಸುವಲ್ಲಿ ಪ್ರಾಯೋಗಿಕ ಕಲಿಕೆಯ ಅನುಭವಗಳ ಮಹತ್ವವನ್ನು ಹಾಗೂ ಕೈದಿಗಳನ್ನು ಬಿಡುಗಡೆಯಾದ ನಂತರ ಸಮಾಜಕ್ಕೆ ಮರು ಸೇರ್ಪಡೆಗೊಳ್ಳಲು ಅನುಕೂಲವಾಗುವಂತೆ ಕೌಶಲ ಮತ್ತು ಶಿಕ್ಷಣದೊಂದಿಗೆ ಸಜ್ಜುಗೊಳಿಸುವ ಗುರಿಯನ್ನು ಹೊಂದಿರುವ ಕಾರ್ಯಕ್ರಮಗಳನ್ನು ವಿವರಿಸಿದರು.
ಸಹ ಪ್ರಾಧ್ಯಾಪಕರಾದ ಡಾ.ಕೆ.ಎಂ.ಮಂಜುಳಾ, ಪಿ.ಆರ್.ಲಕ್ಷ್ಮೀಶ, ಕಾಲೇಜು ಸಿಬ್ಬಂದಿ ಇದ್ದರು.