ಜಿಲ್ಲೆ

ಕಾರವಾರದ ಹುಡುಗಿಗೆ ಪವರ್‌ ಲೀಫ್ಟಿಂಗ್‌ನಲ್ಲಿ 3 ಚಿನ್ನದ ಪದಕ

ಕಾರವಾರ: ನ್ಯೂಜಿಲ್ಯಾಂಡ್‌ನಲ್ಲಿ ಇತ್ತೀಚೆಗೆ ನಡೆದ ಕಾಮನ್‌ವೆಲ್ತ್ ಪವರ್ ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ತಾಲೂಕಿನ ಪ್ರತೀಕ್ಷಾ ನಾಯ್ಕ ಅವರು 3 ಬಂಗಾರದ ಪದಕಗಳನ್ನು ಪಡೆದಿದ್ದಾರೆ.
ನ್ಯೂಜಿಲ್ಯಾಂಡ್‌ನ ಔಕ್ಲಯಾಂಡ್‌ನಲ್ಲಿ ನಡೆದ ಮಹಿಳೆಯದ ಕ್ಲಾಸಿಕ್ ಬೆಂಚ್, ಬೆಂಚ್ ಪ್ರೆಸ್ ಹಾಗೂ ಇಕ್ಯೂಪ್ಡ್‌ ಪವರ್ ಲಿಫ್ಟಿಂಗ್ ಗಳಲ್ಲಿ ೮೪ ಕೆಜಿ ವಿಭಾಗದಲ್ಲಿ ಅವರು ಮೊದಲ ಸ್ಥಾನ ಪಡೆದಿದ್ದಾರೆ. ಅಲ್ಲದೆ, ಈ ಹಿಂದೆ ಇದ್ದ ದಾಖಲೆಗಳನ್ನು ಮುರಿದಿದ್ದಾರೆ. ಅಲ್ಲದೆ, ಮಹಿಳಾ ಜೂನಿಯರ್ ವಿಭಾಗದ ವೀರಾಗ್ರಣಿಯಾಗಿ ಹೊರಹೊಮ್ಮಿದ್ದಾರೆ. ಪ್ರತೀಕ್ಷಾ ಅವರು ಕಾರವಾರ ಕೇಂದ್ರೀಯ ವಿದ್ಯಾಲಯದ ವಿದ್ಯಾರ್ಥಿಯಾಗಿದ್ದು, ಅವರ ತಾಯಿ ಗೀತಾ ಜಿ.ನಾಯ್ಕ ಕದಂಬ ನೌಕಾನೆಲೆಯಲ್ಲಿ ಕ್ಲರ್ಕ್ ಆಗಿದ್ದಾರೆ. ಕರ್ನಾಟಕ ನೌಕಾ ವಲಯ ಮುಖ್ಯಸ್ಥ ರಿಯರ್ ಅಡ್ಮಿರಲ್ ಅತುಲ್ ಆನಂದ್ ಪ್ರತೀಕ್ಷಾ ಅವರನ್ನು ಶುಕ್ರವಾರ ಅಭಿನಂದಿಸಿದರು.
……