ಹುಬ್ಬಳ್ಳಿ: ತಳ್ಳುವ ಗಾಡಿ, ಟಂಟಂಗಳಲ್ಲಿ ತರಕಾರಿ ಮಾರುವುದನ್ನು ಕಂಡಿದ್ದೇವೆ. ಆದರೆ, ಇಲ್ಲೊಬ್ಬ ವ್ಯಾಪಾರಿ ತನ್ನ ಕಾರನ್ನೇ ತರಕಾರಿ ಮಾರಾಟಕ್ಕೆ ಬಳಸಿಕೊಳ್ಳುವ ಮೂಲಕ ಲಾಕ್ಡೌನ್ ಸಮಯವನ್ನು ಸದ್ಬಳಕೆ ಮಾಡಿಕೊಂಡಿದ್ದಾರೆ.
ಎಪಿಎಂಸಿ ಪ್ರಾಂಗಣದಲ್ಲಿ ಈ ವ್ಯಾಪಾರಿ ತರಕಾರಿ ಮಾರಾಟಕ್ಕೆ ಮುಂದಾಗಿದ್ದರು. ಕಾರಿನ ಮುಂದಿನ, ಹಿಂದಿನ ಸೀಟು, ಡಿಕ್ಕಿಯಲ್ಲಿ ಈರುಳ್ಳಿ, ಬೀಟ್ರೂಟ್, ಕ್ಯಾರೆಟ್, ಆಲೂಗಡ್ಡೆ ಮತ್ತಿತರ ತರಕಾರಿ ಇಟ್ಟುಕೊಂಡು, ಕಾರಿನ ಮೇಲೆ ತಕ್ಕಡಿಯಲ್ಲಿ ತೂಕ ಮಾಡುವ ಮೂಲಕ ಮಾರಾಟಕ್ಕೆ ಮುಂದಾಗಿದ್ದರು.